ಅತಿವೃಷ್ಟಿ ಅನಾಹುತಕ್ಕೆ ಸಂಘಟಿತ ಸ್ಪಂದಿಸಿ

2606KLB11
Published on

ಕಲಬುರಗಿ: ಪ್ರಸಕ್ತ ವರ್ಷ ಉತ್ತಮ ಮಳೆಯ ಮುನ್ಸೂಚನೆ ಇದ್ದು, ಕಳೆದ ವರ್ಷ ಬರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು, ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಎದುರಾಗುವ ಸವಾಲುಗಳನ್ನು ಎಲ್ಲ ಇಲಾಖೆಗಳು ಸಂಘಟಿತವಾಗಿ ಪರಸ್ಪರ ಸಹಕಾರದೊಂದಿಗೆ ಎದುರಿಸಬೇಕು. ಸಲ್ಲದ ನೆಪಗಳನ್ನು ಹೇಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಕೃತಿ ವಿಕೋಪಕ್ಕೆ ಸಂಬAಧಿಸಿದAತೆ ಮುಂಗಾರು ಮಳೆ ಅವಧಿಪೂರ್ವ ಮತ್ತು ಮುಂಜಾಗ್ರತಾ ಕ್ರಮಗಳ ಜಿ¯್ಲÁ ಮಟ್ಟದ ಸಭೆಯಲ್ಲಿ ಕೃಷಿ, ಕುಡಿಯುವ ನೀರು, ಒಳಚರಂಡಿ, ಪ್ರವಾಹ ನಿರ್ವಹಣೆ, ಸಾಂಕ್ರಾಮಿಕ ರೋಗ ನಿಯಂತ್ರಣ ಸೇರಿ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಂಘಟಿತವಾಗಿ ಪ್ರಕೃತಿ ವಿಕೋಪ ನಿಯಂತ್ರಣಕ್ಕೆ ಸೂಚಿಸಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕಳಪೆ ಬೀಜ ವಿತರಣೆ ಆಗಬಾರದು. ಅತಿವೃಷ್ಟಿಯಾದರೆ ಬೆಳೆ ರಕ್ಷಣೆಗೆ ಏನು ಮಾಡ್ತೀರಿ ಎಂದು ಪ್ರಶ್ನಿಸಿದರು. ಬಸಿಗಾಲುವೆ ಮಾಡುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದರು.
ಪರವಾನಗಿ ಇಲ್ಲದೆ ಬೀಜ, ಗೊಬ್ಬರ, ಕೀಟನಾಶಕ ಮಾರಿದರೆ, ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಿದರೆ ಕೃಷಿ ಮಳಿಗೆ ವಿರುದ್ಧ ಕ್ರಮ ಕೈಗೊಳ್ಳಬೇಕು. ತಾಲೂಕು ಸಹಾಯಕ ನಿರ್ದೇಶಕರನ್ನೇ ಹೊಣೆ ಮಾಡಬೇಕು. ಲಿಖಿತ ಸೂಚನೆ ನೀಡಿ ಎಂದು ಡಿಸಿ ತರನ್ನುಮ್‌ಗೆ ಸಚಿವರು ನಿರ್ದೇಶಿಸಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ೮.೬೫ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಉತ್ತಮ ಮಳೆಯಿಂದ ಇದುವರೆಗೆ ಶೇ.೩೦ ಬಿತ್ತನೆ ಆಗಿದೆ. ಕಳೆದ ವರ್ಷದಲ್ಲಿ ಬೆಳೆ ವಿಮೆ, ಸ್ಥಳೀಯ ಪ್ರಕೃತಿ ವಿಕೋಪ ಹಾಗೂ ತೊಗರಿ ನೆಟೆ ರೋಗ ಸೇರಿ ಒಟ್ಟು ೬೯೭.೩೪ ಕೋಟಿ ರೂ. ಪರಿಹಾರ ರೈತರಿಗೆ ಸಿಕ್ಕಿದೆ. ಕಳೆದ ವರ್ಷ ೧.೬೨ ಲP್ಷÀ ರೈತರು ಬೆಳೆ ವಿಮೆ ಮಾಡಿದ್ದು, ಪ್ರಸಕ್ತ ೨.೫ ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು. ಎಫ್‌ಐಡಿ ನೋಂದಣಿ ತೀವ್ರಗೊಳಿಸಬೇಕು. ಡಿಬಿಟಿ ಪರಿಹಾರಕ್ಕೆ ಸಹಕಾರಿ ಆಗಲಿದೆ ಸಚಿವ ಪ್ರಿಯಾಂಕ್ ಸೂಚಿಸಿದರು.
ವೈದ್ಯಕೀಯ ಶಿP್ಷÀಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಜಿ¯್ಲೆಯಲ್ಲಿ ಡಿಎಪಿ ಕೊರತೆ ಇದ್ದು, ಇದರಿಂದ ರೈತರು ಪಕ್ಕದ ರಾಜ್ಯ, ಬ್ಲಾÈಕ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಹಣ ನೀಡಿ ಖರೀದಿಸಬೇಕಾಗುತ್ತದೆ. ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಮತ್ತು ಡಿಎಪಿ ದರದ ಮಾಹಿತಿ ಫಲಕ ಹಾಕಿಸಲು ಸೂಚನೆ ನೀಡಿದರು.
ತೋಟಗಾರಿಕೆ ಬೆಳೆ ಪ್ರಮಾಣ ವಿಸ್ತರಣೆ ಆಗುತ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಅತೃಪ್ತಿ ವ್ಯಕ್ತಪಡಿಸಿದರು. ತೋಟಗಾರಿಕೆ ಬೆಳೆ ವಿಸ್ತರಿಸಿ. ಕೋಲ್ಡ್ ಸ್ಟೋರೇಜ್‌ಗಳು ನಿರ್ಮಾಣವಾಗುತ್ತಿದ್ದು, ಕೆಂಬಾಳೆ, ಕಲ್ಲಂಗಡಿ, ಪಪ್ಪಾಯಿಯಂತ ಹಣ್ಣುಗಳನ್ನು ಬ್ರಾÈಂಡ್‌ನಡಿ ಮಾರಾಟ ಮಾಡಬೇಕು ಎಂದರು.
ಜಾನುವಾರುಗಳಿಗೆ ಕರುಳು ಬೇನೆ, ಗಂಟುರೋಗ, ಲಿಂಪಿಸ್ಕಿನ್ ಬರುತ್ತಿದ್ದು, ಸಮರ್ಪಕ ಲಸಿಕೆ ಹಾಕಿಸಬೇಕು ಎಂದು ಸೂಚಿಸಿದರು.ಪಶುಸಂಗೋಪನಾ ಉಪನಿರ್ದೇಶಕ ಡಾ.ಎಸ್.ಡಿ.ಆವಂಟಿ ಮಾತನಾಡಿ, ಜಾನುವಾರು ಸತ್ತರೆ ೧೦ ಸಾವಿರ ರೂ. ನೀಡುತ್ತಿದ್ದು, ಲಸಿಕೆ ನೀಡಲಾಗಿದೆ ಎಂದರು.
ಪ್ರವಾಹ ಪೀಡಿತ ೧೩೫ ಗ್ರಾಮ, ಕಾಳಜಿ ಕೇಂದ್ರಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತರನ್ನುಮ್ ಸಚಿವರಿಗೆ ಮಾಹಿತಿ ನೀಡಿದರು. ಪ್ರವಾಹ ಸಮಸ್ಯೆ ಎದುರಿಸಲು ಎಲ್ಲ ಸಾಮಗ್ರಿ ಸಿದ್ಧವಾಗಿಡಿ ಎಂದು ಸಚಿವ ಖರ್ಗೆ ಸೂಚಿಸಿದರು. ಕಲಬುರಗಿ ಕನೆಕ್ಟ್ ಯೋಜನೆಗೆ ವೇಗ ನೀಡಬೇಕು, ಜನಸ್ಪಂದನ ಅರ್ಜಿಗಳಿಗೆ ಪರಿಹಾರ ಒದಗಿಸಬೇಕು ಎಂದರು.
ಸಿಲಿAಡರ್ ಸ್ಪೋಟ ಜಾಗೃತಿ ಮೂಡಿಸಿ: ಹೊಟೇಲ್‌ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಾರ್ಮಿಕರು ಗಾಯಗೊಂಡಿದ್ದು, ಅಗ್ನಿಶಾಮಕ ದಳದದೊಂದಿಗೆ ಜಾಗೃತಿ ಮೂಡಿಸಬೇಕು. ಹೊಟೇಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಹಾಸ್ಟೆಲ್, ಕೈಗಾರಿಕೆ, ಕಾರ್ಖಾನೆ ಸೇರಿ ಎಲ್ಲೆಡೆ ಮುನ್ನೆಚ್ಚರಿಕೆ ವಹಿಸಲು ತಿಳಿಸಬೇಕು ಎಂದು ಸಚಿವ ಖರ್ಗೆ ಅಗ್ನಿಶಾಮಕ ಅಧಿಕಾರಿ ಗುರುರಾಜಗೆ ಸೂಚಿಸಿದರು. ಇದಕ್ಕೆ ಧನಿಗೂಡಿಸಿದ ಸಚಿವ ಡಾ. ಶರಣಪ್ರಕಾಶ ಪಾಟೀಲ್ ರಸ್ತೆ ಬದಿ ಸಿಲಿಂಡರ್ ಇಟ್ಟು ಆಹಾರ ಮಾರುವ ಬಗ್ಗೆ ಸಮೀಕ್ಷೆ ಮಾಡಿ ಎಂದರು.
ಶಾಸಕ ಎಂ.ವೈ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕೂಡಾ ಅಧ್ಯಕ್ಷ ಮಜರ್ ಆಲಂಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಪಂ ಸಿಇಒ ಭಂವರಸಿAಗ್ ಮೀನಾ, ಎಡಿಸಿ ರಾಯಪ್ಪ ಹುಣಸಗಿ, ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net