

ಕೊಳ್ಳೇಗಾಲ: ಅತಿಯಾಗಿ ಮೆಕ್ಕೆಜೋಳ ಸೇವಿಸಿದ ಪರಿಣಾಮ ತಾಲೂಕಿನ ಜಾಗೇರಿಯ ಸಿ.ಆರ್.ನಗರದಲ್ಲಿ 30ರಿಂದ 35 ವರ್ಷದ ಗಂಡಾನೆಯೊಂದು ಸೋಮವಾರ ಮೃತಪಟ್ಟಿದೆ.
ಸಿ.ಆರ್.ನಗರದ ನಿವಾಸಿ ಶೇಷುರಾಜ್ ಅವರ ಜಮೀನಿನಲ್ಲಿ ಆನೆ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದ ಕೊಳ್ಳೇಗಾಲ ಬಫರ್ ವಲಯದ ಅರಣ್ಯಾಧಿಕಾರಿ ಭರತ್ ಮತ್ತು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಶುವ್ಯೆದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗಿದೆ.
ಈ ಬಗ್ಗೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಸಂತೋಷ್ ಕುಮಾರ್ ಮಾತನಾಡಿ, ಆನೆ ಅತಿಯಾಗಿ ಮೆಕ್ಕೆಜೋಳ ಸೇವಿಸಿರುವ ಪರಿಣಾಮ ಫುಡ್ ಪಾಯಿಸನ್ ಆಗಿದೆ. ಖಾಲಿ ಹೊಟ್ಟೆಯಲ್ಲಿಯೇ ಹೆಚ್ಚಾಗಿ ಮೆಕ್ಕೆಜೋಳ ತಿಂದಿರುವುದರಿಂದ ಆನೆ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.