ಅತಿಥಿ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

application
Published on

ಬೆಳಗಾವಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಕನ್ನಡ-15, ಇಂಗ್ಲಿಷ್-13, ಹಿಂದಿ-19, ಉರ್ದು-08, ಸಮಾಜ ವಿಜ್ಞಾನ-16, ಗಣಿತ-14 ವಿಜ್ಞಾನ-17 ಅತಿಥಿ ಶಿಕ್ಷಕರ ಹುದ್ದೆಗಳಿಗೆ ಹಾಗೂ ಮುರಾರ್ಜಿ ದೇಸಾಯಿ ವಸತಿ ಕಾಲೇಜು, ಡಾ.ಎಪಿಜೆ ಅಬ್ದುಲ್ ಕಲಾಂ ಕಾಲೇಜು ಮತ್ತು ಮೌಲಾನಾ ಆಜಾದ ಪಪೂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ

ಕನ್ನಡ-4, ಇಂಗ್ಲಿಷ್-4, ಉರ್ದು-3, ಗಣಿತ ಶಾಸ್ತ್ರ-4 ಭೌತಶಾಸ್ತ್ರ-5, ಜೀವಶಾಸ್ತ್ರ-5, ರಸಾಯನ ಶಾಸ್ತ್ರ-5, ವಾಣಿಜ್ಯ ಶಾಸ್ತ್ರ-3, ವ್ಯವಹಾರ ಶಾಸ್ತ್ರ-3, ಕಂಪ್ಯೂಟರ್ ವಿಜ್ಞಾನ-3, ಅರ್ಥಶಾಸ್ತ್ರ-3, ವಿಷಯವಾರು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಇಲಾಖೆಯ ವೆಬ್‌ಸೈಟ್: ಠಿಠಿ://ಟಞ.ಚ್ಟ್ಞಠಿ.ಜಟ.ಜ್ಞಿ ಮೂಲಕ ಭರ್ತಿಮಾಡಿ ಸದರಿ ಅರ್ಜಿಯೊಂದಿಗೆ ದೃಢೀಕೃತ ದಾಖಲಾತಿಗಳನ್ನು ಮೇ 19 ಒಳಗಾಗಿ ಸಲ್ಲಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net