ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಿರಲು ಆಗ್ರಹಿಸಿ ಧರಣಿ

13HLY-2
Published on

ಹಳಿಯಾಳ: ತಾಲೂಕಿನಲ್ಲಿ ಜಿಪಿಎಸ್ ಆಗದ 178 ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ (ಕೆಂಪುಸೇನೆ) ಪದಾಧಿಕಾರಿಗಳು ಪಟ್ಟಣದ ಡಿಎಫ್​ಒ ಕಚೇರಿ ಎದುರು ಸೋಮವಾರ ದಿನವಿಡಿ ಧರಣಿ ನಡೆಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಾಮಚಂದ್ರ ವಡ್ಡರ ಮಾತನಾಡಿ, ತಾಲೂಕಿನಲ್ಲಿ 50-60 ವರ್ಷಗಳಿಂದ ಜಮೀನುರಹಿತರು ಅರಣ್ಯ ಅತಿಕ್ರಮಣ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಅವರಲ್ಲಿ 178 ಅತಿಕ್ರಮಣದಾರರ ಜಿಪಿಎಸ್ ಆಗದೇ ಭೂಒಡೆತನ ನೀಡುವ ಪ್ರಕ್ರಿಯೆ ನನೆಗುದಿದೆ ಬಿದ್ದಿದೆ. ಈ ಪ್ರಕ್ರಿಯೆ ಮುಗಿಯುವರೆಗೂ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬಾರದೆಂದು ಕಳೆದ ವರ್ಷ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಅದಕ್ಕವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು. ಆದರೆ, ವಾರದಿಂದ ತಾಲೂಕಿನ ಸಾಂಬ್ರಾಣಿ, ರಾಮಾಪುರ, ಮಾಗವಾಡ ಮೊದಲಾದೆಡೆ ಅರಣ್ಯ ಇಲಾಖೆಯವರು ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಸುತ್ತಿದ್ದು, ಜಮೀನಿನಲ್ಲಿ ಗುರುತು ಹಾಕುತ್ತಿದ್ದಾರೆ. ಈ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net