ಅಣೆಕಟ್ಟೆಗಳಲ್ಲಿ ಮರಳು ತೆಗೆಯಲು ಸಮೀಕ್ಷೆ

12KWR1
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಕದ್ರಾ ಸೇರಿ ಸಿಆರ್‌ಜಡ್ ವ್ಯಾಪ್ತಿಯ ಹೊರಗಿರುವ ಅಣೆಕಟ್ಟೆಗಳಿಂದ ಮರಳು ತೆಗೆಯುವ ಬಗ್ಗೆ ಸಮೀಕ್ಷೆ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಿಆರ್‌ಜಡ್ ಪ್ರದೇಶದಲ್ಲಿ ಮರಳು ತೆಗೆಯಲು ವಿವಿಧ ಸಮಸ್ಯೆ ಇದೆ. ಇದರಿಂದ ಅಣೆಕಟ್ಟೆಗಳಲ್ಲಿ ಮರಳು ತೆಗೆದಲ್ಲಿ ಅಲ್ಲಿನ ಹೂಳೂ ಖಾಲಿಯಾಗಲಿದೆ. ಅಲ್ಲದೆ, ಮರಳಿನ ಸಮಸ್ಯೆಯೂ ನೀಗಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಸಭೆಯಲ್ಲಿ ಸೂಚಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು ಸಮೀಕ್ಷೆ ನಡೆಸುವಂತಾ ಆದೇಶಿಸಿದರು.
ಬಂದರುಗಳ ಹೂಳೆತ್ತಲು 20 ಕೋಟಿ ರೂ. ಒದಗಿಸಲಾಗಿದೆ. ಅದರಲ್ಲಿ ಕಾರವಾರ ಹಾಗೂ ಭಟ್ಕಳ ಬಂದರಿಗೆ ಹೂಳೆತ್ತಲು 11 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ, ಹೂಳೆತ್ತುವ ಗುತ್ತಿಗೆದಾರರ ಲಾಬಿಯಿಂದ ಎರಡು ಬಂದರುಗಳ ಹೂಳೆತ್ತಲು ಟೆಂಡರ್ ಬಂದಿಲ್ಲ. ಇದರಿಂದ ಮೀನುಗಾರಿಕೆ ಸಂಘಗಳಿಗೇ ಹೂಳೆತ್ತುವ ಜವಾಬ್ದಾರಿ ವಹಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.
ಜಿಲ್ಲೆಯಲ್ಲಿ 5326 ರೈತರ 3209 ಹೆಕ್ಟೇರ್ ಅಡಕೆ ಬೆಳೆಗೆ ಹಳದಿ ಚುಕ್ಕೆ ರೋಗ ಕಾಣಿಸಿಕೊಂಡಿದೆ. ಅದನ್ನು ನಿಯಂತ್ರಿಸಲು ಹೋಬಳಿ ಮಟ್ಟದಲ್ಲಿ ಜಾಗೃತಿ ವಹಿಸಬೇಕು ಎಂದರು.
ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾಽಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸ್‌ಪಿ ವಿಷ್ಣುವರ್ಧನ, ಸಿಇಒ ಈಶ್ವರ ಖಂಡೂ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net