ಅಣಬೆಗೆ ಹೆಚ್ಚಿದ ಬೇಡಿಕೆ

16spt1
ಸೋಮವಾರಪೇಟೆ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಅಣಬೆ ಬೇಸಾಯದ ಕುರಿತ ಕಾರ್ಯಾಗಾರದಲ್ಲಿ ಸ್ವಸಹಾಯ ಸಂಘದ ಸದಸ್ಯರು ಅವಶ್ಯಕ ಮಾಹಿತಿ ಪಡೆದುಕೊಂಡರು. ಯಾದವ್‌ಬಾಬು, ರಶ್ಮಿ, ಪೂರ್ಣಿಮಾ ಇದ್ದರು.
Published on

ಸೋಮವಾರಪೇಟೆ: ಅಣಬೆ ಸಸ್ಯವರ್ಗಕ್ಕೆ ಸೇರಿದ ಶಿಲೀಂಧ್ರ. ಆಹಾರ ಪದಾರ್ಥಗಳಲ್ಲಿ ಇದೊಂದು ತರಕಾರಿ ಎಂದು ಗುರುತಿಸಲಾಗಿದೆ. ಅತ್ಯಧಿಕ ಪ್ರೋಟಿನ್ ಇರುವ ಆಹಾರ ವರ್ಧಕ ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಶ್ಮಿ ಹೇಳಿದರು.

ಒಕ್ಕಲಿಗರ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಇತ್ತೀಚೆಗೆ ಆಯೋಜಿಸಿದ್ದ ಅಣಬೆ ಬೇಸಾಯದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಅಣಬೆ ಕೃಷಿಯಿಂದ ಕಡಿಮೆ ಅವಧಿಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದರು.

ಕಾರ್ಯಾಗಾರದಲ್ಲಿ ಕೃಷಿ ಸಹಾಯಕ ನಿರ್ದೇಶಕ ಯಾದವ್ ಬಾಬು, ಕೃಷಿ ಅಧಿಕಾರಿ ನವ್ಯಾ ನಾಣಯ್ಯ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net