ಅಡಕೆ ಮರಗಳಿಗೆ ಹಾನಿ

13 YLP 01
Published on

ಯಲ್ಲಾಪುರ: ತಾಲೂಕಿನಲ್ಲಿ ಗುರುವಾರ ಮಳೆಯ ಪ್ರಮಾಣ ಕಡಿಮೆ ಇದ್ದು, ಬುಧವಾರ ರಾತ್ರಿಯ ಗಾಳಿ-ಮಳೆಗೆ ವಿವಿಧೆಡೆ ಹಾನಿ ಉಂಟಾಗಿದೆ. ಹಿತ್ಲಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಿದ್ರಳ್ಳಿಯ ಶಿವರಾಮ ಹೆಗಡೆ ಅವರಿಗೆ ಸೇರಿದ ತೋಟದ ಮೇಲೆ ಮರ ಬಿದ್ದು, ಅಡಕೆ ಮರಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.

ಕಳೆದ ವರ್ಷ ಮಳೆಗಾಲದಲ್ಲೇ ಶಿಥಿಲಗೊಂಡಿದ್ದ ನಂದೊಳ್ಳಿ ಗ್ರಾ.ಪಂ. ವ್ಯಾಪ್ತಿಯ ಗುಮ್ಮಾನಿಮನೆ ಬಳಿ ಇರುವ ಬಸ್ ತಂಗುದಾಣ ಬಿದ್ದಿದೆ. ಗ್ರಾ.ಪಂ. ಉಸ್ತುವಾರಿ ಅಧಿಕಾರಿ ಎನ್.ಆರ್. ಹೆಗಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net