

ಬಾಗಲಕೋಟೆ: ವಿಶ್ವದಲ್ಲೇಯೆ ನೆಲೆಸಿರುವ ಮಾನವೀಯ ಅಂತಃಕರಣವುಳ್ಳ ಜನರು ಜಗತ್ತು ಕಂಡ ಅಟಲ್‌ಬಿಹಾರಿ ವಾಜಪೇಯಿಯವರನ್ನು ನೆನೆಯುವಂತ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ನಗರದ ತಮ್ಮ ಕಚೇರಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ೯೮ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಜಪೇಯಿ ಅವರ ರಾಷ್ಟ್ರ ಭಕ್ತಿ, ಅನುಪಮ ಸೇವೆಯನ್ನು ಸ್ಮರಿಸುವ, ವಿಚಾರಗಳನ್ನು ಅವಲೋಕನ ಮಾಡಲಾಗುತ್ತಿದೆ. ನಾವು ಔಪಚಾರಿಕವಾಗಿ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಅದನ್ನು ಅಂತಃಕರಣದಿಂದ ನಾನು ೧೭ ವರ್ಷಗಳ ರಾಜಕೀಯವಾಗಿ ವನವಾಸ , ನೋವುಗಳನ್ನು ಅನುಭವಿಸಿ ವಿಧಾನ ಪರಿಷತ್‌ನ ಶಾಸಕನಾಗಿ ಆಯ್ಕೆಯಾದೆ. ಎಲ್ಲ ಹಳೆ ಕಾರ್ಯಕರ್ತರನ್ನು ಜನಸಂಘದಿಂದ ರಾಜಕೀಯವಾಗಿ ದುಡಿಯುತ್ತಾ ಬಂದು ಇಂದು ಪ್ರಥಮ ಸಾಲಿನಲ್ಲಿ ಬಂದಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಮಾತನಾಡಿ, ಕಾರ್ಯಕರ್ತರ ಹಿತವನ್ನು ಬಯಸುವವರು ಜನಪ್ರತಿನಿಽ ಯಾಗಬೇಕು. ಆದರೇ ಕಾರ್ಯಕರ್ತರನ್ನು ತುಳಿಯುವಂತಹ ಕೆಲಸ ಬಾಗಲಕೋಟೆ ವಿಧಾನ ಸಭಾ ಮತಕ್ಷೇತ್ರದಲ್ಲಿ ನಡೆಯುತ್ತಿದೆ. ಪಕ್ಷದ ತತ್ವ ಸಿದ್ದಾಂತ ಗಾಳಿಗೆ ತೂರುವವರಿಗೆ ಬುದ್ದಿ ಕಲಿಸಬೇಕಾಗಿದೆ. ಬಿಜೆಪಿ ಪಕ್ಷವು ಕಾರ್ಯಕರ್ತರಿಂದಕೂಡಿರುವ ಪಕ್ಷವಾಗಿದೆ. ಇದು ಯಾರದೊ ಒಬ್ಬರ ಆಸ್ತಿ ಅಲ್ಲ ಎಂದರು.
ಮತಕ್ಷೇತ್ರದಲ್ಲಿ ಕೆಲವು ಅಚ್ಚರಿ ಘಟನೆಗಳು ನಡೆಯುತ್ತಿದ್ದು, ಇದಕ್ಕೂ ಉದಾಹರಣೆ ಎಂದರೇ ಕಾಂಗ್ರೆಸ್ ಕಾರ್ಯಕರ್ತನ ಮೂಲಕ ಬಿಜೆಪಿ ಕಾರ್ಯಕರ್ತರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿ ಮರು ದಿನವೇ ಅವನಿಗೆ ೨೦ ಸಾವಿರ ರೂ.ಗಳ ಪರಿಹಾರ ನೀಡಿ ದಂತಹ ಪ್ರಕರಣಗಳು ಸಾಕ್ಷಿಯಾಗಿದೆ. ಇದೊಂದು ಗಿನ್ನಿಸ್ ದಾಖಲೆ ಎಂದು ವ್ಯಂಗ್ಯವಾಡಿದ ಅವರು, ಇಂತಹ ಎಲ್ಲ ವಿಷಯಗಳನ್ನು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಜನರ ಕಷ್ಟ, ಸುಖದಲ್ಲಿ ಭಾಗವಹಿಸುವಂತಹ ನಾಯಕನನ್ನು ಆಯ್ಕೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಇದರ ನೇತೃತ್ವವನ್ನು ಪಿ.ಎಚ್.ಪೂಜಾರ ಅವರು ವಹಿಸಬೇಕು ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಘನಶ್ಯಾಂ ಭಾಂಡಗೆ ಮಾತನಾಡಿ, ಕರುಣೆಯ ತುತ್ತು ಆರಂಭಿಸಿದ ಪೂಜಾರ ಚಾರಿಟೇಬಲ್ ಟ್ರಸ್ಟ್ ಕಳೆದ ೭ ವರ್ಷಗಳಿಂದ ಸತತವಾಗಿ ನಿರ್ಗತಿಕರಿಗೆ ದಿನದ ಎರಡು ಹೊತ್ತು ಊಟ ನೀಡುವ ಕಾರ್ಯ ಮಾಡುತ್ತಿದೆ. ಇದು ಎಲ್ಲರ ಜನಮೆಚ್ಚಿಗೆಗೆ ಪಾತ್ರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತ ಮಾತೆ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಾರತೀಯ ಜನಸಂಘದ ಹಳೆ ಕಾರ್ಯಕರ್ತರಾದ ಬಸಪ್ಪ ಇಂಡಿ, ಹುಚ್ಚಯ್ಯ ನಿಂಬಲಗುಂದಿ, ಪುಂಡಲೀಕಪ್ಪ ಮೂಲಿಮನಿ ಹಳೆಯ ನೆನಪು ಮೆಲುಕು ಹಾಕಿದರು.
ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕÀ ಡಾ.ಸಿ.ಎಸ್.ಪಾಟೀಲ, ಡಾ.ಶೇಖರ್ ಮಾನೆ, ಸಂತೋಷ ಹೊಕ್ರಾಣಿ, ಸಂಜೀವ ವಾಡ್ಕರ ನಾರಾಯಣ ದೇಸಾಯಿ, ಗಂಗಾಧರ ಮುರನಾಳ, ವಿಜಯ ಸುಲಾಖೆ, ಗಣಪತಿ ಪತ್ತಾರ, ಸಂಗಣ್ಣ ಕುಪ್ಪಸ್ತ ಸೇರಿ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.