

ಕಲಬುರಗಿ: ಅಗ್ನಿಪಥ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಯಾಗಿದ್ದು, ಅಗ್ನಿವೀರರಿಗೆ ಹಲವು ಸೌಲಭ್ಯಗಳು ಈ ಯೋಜನೆ ಅಡಿ ಲಭ್ಯವಿದೆ ಎಂದು ಬಿಜೆಪಿ ಪೂರ್ವ ಸೈನಿಕ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಬಸವರಾಜ ಬಿರಾದಾರ ಹೇಳಿದರು.
ಅಗ್ನಿಪಥ ಯೋಜನೆ ಅಡಿ ನಾಲ್ಕು ವರ್ಷ ಸೈನಿಕರಾದ ಯುವಕರಿಗೆ ಕೇಂದ್ರ ಸಶಸ್ತç ಪಡೆ, ರP್ಷÀಣಾ ಸಾರ್ವಜನಿಕ ವಲಯದ ಉದ್ಯಮ, ನಾಗರಿಕ ವಿಮಾನಯಾನ, ಸಾರ್ವಜನಿಕ ಉದ್ಯಮಗಳು, ಬಂದರುಗಳು, ಹಡಗು, ಜಲಮಾರ್ಗಗಳ ಸಚಿವಾಲಯ ಮತ್ತು ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಸೇರ್ಪಡೆಗೆ ಶೇ. ೧೦ ಮೀಸಲು ಕಲ್ಪಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹುತಾತ್ಮರಾದ ಅಗ್ನಿವೀರ ಸೈನಿಕರ ಕುಟುಂಬಕ್ಕೆ ನೀಡುವ ಸೌಲಭ್ಯಗಳ ಸ್ವರೂಪ, ಪ್ರಮಾಣದಲ್ಲಿ ತಾರತಮ್ಯವಿದೆ ಎಂದು ರಾಷ್ಟçಪತಿ ದ್ರೌಪದಿ ಮುರ್ಮು ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಬಿರಾದಾರ, ಯಾವುದೇ ತಾರತಮ್ಯ ಮಾಡುತ್ತಿಲ್ಲ. ಕರ್ತವ್ಯದಲ್ಲಿದ್ದು, ಹುತಾತ್ಮರಾದರೆ ಸುಮಾರು ಒಂದು ಕೋಟಿ ರೂ. ಪರಿಹಾರ, ೪೯ ಲಕ್ಷ ರೂ. ವಿಮಾ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.
ಶಾಂತಯ್ಯ ಸ್ವಾಮಿ, ಪರಮೇಶ್ವರ ಶಿವಗೊಂಡ, ರಾಜೇಂದ್ರ ಬಿರಾದಾರ ಇದ್ದರು.