ಅಗತ್ಯವಿರುವ ಅಭಿವೃದ್ಧಿ ಮಾಡಿದ ಆತ್ಮವಿಶ್ವಾಸ ನನಗಿದೆ

bkt-14-2
ಪಾದಯಾತ್ರೆ ಮೂಲಕ ಮತಯಾಚನೆ.
Published on

ಬಾಗಲಕೋಟೆ: ಜಿಲ್ಲೆಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ನನ್ನ ಅವದಿಯಲ್ಲಿ ನಾನು ಮಾಡಿದ್ದೆನೆ, ಜಿಲ್ಲೆಯ ಜನರಿಗೆ ಗೋತ್ತಿದೆ, ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ನನಗೆ ಆತ್ಮವಿಶ್ವಾಸವಿದೆ ಆ ನಿಟ್ಟಿನಲ್ಲಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ದಿಸಿರುವೆ ಮತದಾರರ ಆಶಿರ್ವಾದ ದಿಂದ ನಿಶ್ಚತವಾಗಿ ಗೆಲ್ಲುತ್ತೆನೆ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದರಾದ ಪಿ.ಸಿ.ಗದ್ದಿಗೌಡರ ಹೇಳಿದರು.

ಅವರು ರವಿವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಭಾಗವಹಸಿ ಮತಯಾಚನೆ ಮಾಡಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದಲ್ಲಿ ಸರ್ವ ಸಮುದಾಯಗಳಿಗೆ ಸಮಾನ ಯೋಜನೆಗಳನ್ನು ರೂಪಿಸಿ, ದೇಶದ ಸರ್ವಾಂಗಿಣ ಅಭಿವೃದ್ದಿ ಆಗುತ್ತಿದೆ, ಆ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಗೆ ಅವಶ್ಯವಿರುವ ರಾಷ್ಟ್ರೀಯ ಹೆದ್ದಾರಿಗಳಾದ ಬಾನಾಪೂರ- ಗದ್ದನಕೇರಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ, ಬಾಡಗಂಡಿಯಿಂದ ನರಗುಂದ, ಮಲಪ್ರಭಾ ನದಿಗೆ ಕೋಣ್ಣುರ ಹತ್ತಿರ ಬ್ರೀಜ್, ನರಗಗುಂದ ವರವಲಯದ ಬೈಪಾಸ್ ರಸ್ತೆ ಸೇರಿದಂತೆ ಒಟ್ಟು ೨೦ ಕಾಮಗಾರಿಗಳು ೧೧೪ ಕೋಟಿ ರೂ ವೆಚ್ಚದಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ, ರೇಲ್ವೆ ಸಂಪರ್ಕ ಹಾಗೂ ಆಧುನಿಕ ರೈಲು ನಿಲ್ದಾಣಗಳು, ಬಾಗಲಕೋಟೆ ಕುಡಚಿಮಾರ್ಗ,ಗದಗ ಹುಟಗಿ ಮಾರ್ಗ, ಜಿಲ್ಲಾ ಕೇಂದ್ರದಲ್ಲಿ ೧೨.೪೫ ಕೋಟಿ ರೂ ವೆಚ್ಚದಲ್ಲಿ ನೂತನ ಅತ್ಯಾಧುನಿಕ ರೈಲ್ವೆ ನಿಲ್ದಾಣ ನಿರ್ಮಾಣ, ಮತ್ತು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಮುಂಗಾರು ಹಂಗಾಮಿಗೆ ರೈತರಿಗೆ ರೂ,೮೪೭೫,೦೬ ಲಕ್ಷ ಪರಿಹಾರ ವಿತರಿಸಲಾಗಿದೆ ಇದರಲ್ಲಿ ೬೯.೮೨೨ ರೈತರು ಈ ಯೋಜನೆ ಪ್ರಯೋಜನ ಪಡೆದಿದ್ದಾರೆ, ಇನ್ನು ಹಿಂಗಾರು ಹಂಗಾಮಿಗೆ ರೂ,೧೦೯೮೦.೦೭ ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ನಮ್ಮೆ ಬಾಗಲಕೋಟೆ ಮತಕ್ಷೇತ್ರದಲ್ಲಿ 6000 ಸಾವಿರ ಕೋಟಿ ರೂ ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದು, ಇನ್ನ ಕೂಡಾ ಕೆಲವೂ ಕಾಮಗಾರಿ ನಡೆದಿದ್ದು ಎಲ್ಲವೂ ಜನರ ಕಣ್ಣಮುಂದೆ ಇದೆ, ಅಭಿವೃದ್ಧಿ ದೃಷ್ಟಿಯಿಂದ ಜನ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಇಂದು ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ ಪ್ರಧಾನ ಮೋದಿಯವರನ್ನು ಜನ ಎಂದು ಮರೆಯುವದಿಲ್ಲಾ ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದು ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುತ್ತಾರೆ ಎಂದರು.

ರಾಜ್ಯ ಸಭಾ ಸdಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಸದಸ್ಯರಾದ ಶಶಿಕಲಾ ಮಜ್ಜಗಿ,ಸಾಗರ ಬಂಡಿ, ಈಶ್ವರ ಸುಗಂದಿ, ಸಂಗಣ್ಣತಿಮ್ಮಣ್ಣವರ, ರಾಮಣ್ಣ ಕಟ್ಟಿಮನಿ, ಅಶೋಕ ಕಲಾಲ, ದಶರಥ ಪತಂಗೆ, ಸವಿತಾ ಗಡ್ಡಿಮಠ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net