ಅಗತ್ಯಕ್ಕೆ ತಕ್ಕಂತೆ ರೈತರಿಗೆ ರಸಗೊಬ್ಬರ ಮಾರಾಟ

Sale of chemical fertilizers to farmers based on requirement.
ಚಿಂದೆನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಭುಲಿಂಗಮೂರ್ತಿ
ಚಿಂದೆನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯನ್ನು ಅಧ್ಯಕ್ಷ ಶಂಭುಲಿಂಗ ಮೂರ್ತಿ ಉದ್ಘಾಟಿಸಿದರು. ಕೇಶವಮೂರ್ತಿ, ಮಾದನಾಯಕ, ಉಮೇಶ್, ಶ್ರೀಧರ್ ಇತರರು ಇದ್ದರು.Shambulinga Murthy, the President, inaugurated the meeting of the Chindenahalli Agricultural Credit Cooperative Society. Keshavamurthy, Madanayaka, Umesh, Sridhar, and others were present.
Published on

ಗಂಡಸಿ: ಈ ಹಿಂದೆ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿದ್ದವರು ಸಂಘಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಚಿಂದೆನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಭುಲಿಂಗಮೂರ್ತಿ ದೂರಿದರು.

ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ಮಹಾಸಭೆಯಲ್ಲಿ ಮಾತನಾಡಿ, ರೈತ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಘಗಳು ಬೆನ್ನೆಲುಬಾಗಿವೆೆ. ಆದರೆ, ಈ ಹಿಂದೆ ಅಧಿಕಾರದಲ್ಲಿದ್ದವರು ಅವ್ಯವಹಾರ ಪ್ರಶ್ನಿಸಿ ಸೂಕ್ತ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ತೊಂದರೆ ಎದುರಿಸುವಂತಾಗಿದೆ ಎಂದರು.

ರೈತರಿಗೆ ಅಗತ್ಯ ಸಂದರ್ಭದಲ್ಲಿ ರಸಗೊಬ್ಬರದ ಕೊರತೆಯಾಗದಂತೆ ಸಂಘದ ಮೂಲಕ ಮಾರಾಟ ಮಾಡಲಾಗುವುದು ಎಂದ ಅವರು, ಸಂಘದ ಸದಸ್ಯರ ಭೂಮಿಯ ವಿಸ್ತೀರ್ಣ ಹಾಗೂ ಅಗತ್ಯತೆಗೆ ಅನುಗುಣವಾಗಿ ಸಾಲ ಸೌಲಭ್ಯ, ಹೈನುಗಾರಿಕೆಗೆ ಸಾಲ ನೀಡಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು

ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಕೆಂಕೆರೆ ಕೇಶವಮೂರ್ತಿ, ನಿರ್ದೇಶಕರಾದ ಮಾದನಾಯ್ಕ, ಉಮೇಶ್, ಶ್ರೀಧರ್, ವಸಂತ, ಮಹೇಂದ್ರ, ವಿಜಯ್‌ಕುಮಾರ್, ಉದಯ್‌ಕುಮಾರ್ ಶಿವಣ್ಣ, ಮಮತಾ ಲೋಕೇಶ್, ಸುಮಿತ್ರಾ, ಸಂಘದ ಕಾರ್ಯನಿರ್ವಹಣಾಧಿಕಾರಿ ತಿಲಕ್, ಸಿಬ್ಬಂದಿ ಚಂದನ್, ಗಿರೀಶ್, ಲತಾ ಹಾಜರಿದ್ದರು.

ಫೋಟೋ 21ರಲ್ಲಿ 1

ಚಿಂದೆನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯನ್ನು ಅಧ್ಯಕ್ಷ ಶಂಭುಲಿಂಗ ಮೂರ್ತಿ ಉದ್ಘಾಟಿಸಿದರು. ಕೇಶವಮೂರ್ತಿ, ಮಾದನಾಯಕ, ಉಮೇಶ್, ಶ್ರೀಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net