ಅಕ್ರಮವಾಗಿ ಗುಡ್ಡ ಅಗೆತ

1gkn1-a-
Published on

ಗೋಕರ್ಣ: ಇಲ್ಲಿನ ಚೌಡಗೆರೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಜೆಸಿಬಿ ಬಳಸಿ ಅಕ್ರಮವಾಗಿ ಗುಡ್ಡವನ್ನು ಅಗೆಯುತ್ತಿರುವ ಸ್ಥಳಕ್ಕೆ ಕುಮಟಾ ಉಪವಿಭಾಗಾಧಿಕಾರಿ ಅಜಿತ್ ರೈ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ವಿಸ್ತಾರವಾದ ಜಾಗದಲ್ಲಿದ್ದ ಎತ್ತರದ ಗುಡ್ಡವನ್ನು ನೆಲಸಮ ಮಾಡಿ ಮಣ್ಣು ಸಾಗಿಸಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಒಪ್ಪಿಗೆ ಪಡೆಯದೆ ಕೆಲಸ ಮಾಡುತ್ತಿರುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆದೇಶಿಸಿ ಸಂಬಂಧಿಸಿದ ಜಾಗದ ಮಾಲೀಕರಿಗೆ ಎಸಿ ಎಚ್ಚರಿಕೆ ನೀಡಿದರು.

ಅಲ್ಲದೆ, ಸಮುದ್ರ ತೀರದಲ್ಲಿ ಹೊಸ ಕಿರು ಸೇತುವೆ ನಿರ್ವಿುಸಲಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು.. ಪಿಡಬ್ಲ್ಯುಡಿ ಇಲಾಖೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿರುವ ಈ ರಸ್ತೆಯಲ್ಲಿನ ವಾಹನ ಸಂಚಾರವನ್ನು ಜ.4ರಿಂದ ಕಾಮಗಾರಿ ಮುಗಿಯುವ ವರೆಗೆ ನಿರ್ಬಂಧಿಸುವಂತೆ ಎಸಿ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರು ಪರಿಶೀಲನೆ ಮಾಡಿದರು. ಗ್ರಾಪಂ ಆಡಳಿತಾಧಿಕಾರಿ ಆರ್.ಜಿ.ಗುನಗಿ,ಇಂಜನಿಯರ್ ಶಶಿಕಾಂತ ಕೊಳೆಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net