ಅಕ್ರಮ ವಿದ್ಯುತ್‌ ಸಂಪರ್ಕಕ್ಕೆ 7 ಜಾನುವಾರುಗಳು ಬಲಿ

IMG-20221018-WA0021
Published on


ಕಾರವಾರ:ಗದ್ದೆಗೆ ಹಾಕಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ಏಳು ಜಾನುವಾರುಗಳು ಮೃತಪಟ್ಟ ಘಟನೆ ಸೋಮವಾರ ರಾತ್ರಿ ಕಿನ್ನರ ಬೋರಿಬಾಗದಲ್ಲಿ ನಡೆದಿದೆ.
ಸೈರೋಬಾ ದತ್ತಾರಾಮ ನಾಯ್ಕ ಹಾಗೂ ಸಾವಳೊ ಕುಶಾಲಿ ನಾಯ್ಕ ಅವರಿಗೆ ಸೇರಿದ ಮೇಯಲು ಬಿಟ್ಟಿದ್ದ ಎಮ್ಮೆ, ಕೋಣ ಸೇರಿ ಏಳು ಜಾನುವಾರುಗಳು ಮೃತಪಟ್ಟಿದ್ದು, ಅವುಗಳ ಮೌಲ್ಯ ಸುಮಾರು 2 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ನರಸಿಂಹ ನಾರಾಯಣ ಕಾಣೆಕರ್, ಆನಂದರಾಯ ರಾಮಾ ಕಾಣೆಕರ್, ದಯಾನಂದ ರಾಮಾ ಕಾಣೆಕರ್ ಎಂಬುವವರು ತಮ್ಮ ಗದ್ದೆಗೆ ಸಮೀಪದ ಪಂಪ್ ಹೌಸ್‌ನಿಂದ ನೇರವಾಗಿ ವಿದ್ಯುತ್ ಸಂಪರ್ಕ ನೀಡಿದ್ದೇ ಇದಕ್ಕೆ ಕಾರಣ ಎಂದು ಅವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net