ಅಕ್ರಮ ಮರಳು ಅಡ್ಡೆ ಮೇಲೆ ಆಧಿಕಾರಿಗಳ ದಾಳಿ

8 jyd 02
Published on

ಜೊಯಿಡಾ: ತಾಲೂಕಿನ ವೈಜಗಾಂವ ಗ್ರಾಮದ ಡುಮಕರವಾಡಿಗೆ ಹೋಗುವ ರಸ್ತೆ ಪಕ್ಕದ ಅರಣ್ಯದಲ್ಲಿ ಆಕ್ರಮವಾಗಿ ಮರಳು ದಾಸ್ತಾನು ಅಡ್ಡೆ ಮೇಲೆ ಅಧಿಕಾರಿಗಳ ತಂಡ ಗುರುವಾರ ದಾಳಿ ಮಾಡಿ ಅಂದಾಜು 57 ಸಾವಿರದ ರೂ. ಮೌಲ್ಯದ 86 ಟನ್ ಮರಳನ್ನು ಜಪ್ತಿ ಮಾಡಿದೆ.
ಕಾರವಾರದ ಸಹಾಯಕ ಆಯುಕ್ತೆ ಜಯಲಕ್ಷ್ಮೀ ರಾಯಕೋಡ ನಿರ್ದೇಶನದನದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಅರಣ್ಯ, ಶಿಂಗರಗಾಂವ ಗ್ರಾಪಂ, ಮತ್ತು ಜಿಪಂ ಅಧಿಕಾರಿಗಳ ತಂಡ ಮರಳನ್ನು ವಶಕ್ಕೆ ಪಡೆದು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಗೆ ಹಸ್ತಾಂತರಿಸಿತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರವಾರದ ಜಯರಾಮ ನಾಯ್ಕ, ಇಂಜಿನಿಯರ್ ಪ್ರವೀಣ, ರಾಮನಗರ ಪಿಎಸ್​ಐ ಲಕ್ಷ್ಮಣ ಪೂಜಾರ, ಡಿಆರ್​ಎಫ್​ಒ ದೀಪಕ ಬಂದಗಿ, ಶಿಂಗರಗಾಂವ ಪಿಡಿಒ ವೆಂಕಟೇಶ ಕಾಂಬಳೆ, ಕಂದಾಯ ಇಲಾಖೆಯ ಮಂಜುನಾಥ ಲಮಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net