

ಕಲಬುರಗಿ: ವಾಲ್ಮೀಕಿ ಅಭಿವೃದ್ಧಿ ನಿಗಮ, ಎಸ್‌ಸಿಪಿ/ಟಿಎಸ್‌ಪಿ ಮೀಸಲು ಹಣ ದುರ್ಬಳಕೆ, ಮುಡಾ ಸೈಟ್, ಯಾದಗಿರಿ ಪಿಎಸ್‌ಐ ಪರಶುರಾಮ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಆರ್‌ಪಿಐ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಪ್ರತಿನಿಧಿಗೆ ಮನವಿಪತ್ರ ಸಲ್ಲಿಸಿದರು. ಎ.ಬಿ.ಹೊಸಮನಿ, ಪಾಂಡುರAಗ ಕೊಟ್ರೆ, ರಾಜಕುಮಾರ ವಡಗೇರಿ, ರೇವಣಸಿದ್ದಪ್ಪ, ಶಿವರಾಜ ಮಾನವಿ, ಶಂಕರ ಕೊರವಿ ಇತರರಿದ್ದರು.