ಅಕ್ರಮ ಡೀಸೆಲ್ ಮಾರಾಟ, ನಾಲ್ವರ ಬಂಧನ

4SGN02
Published on

ಶಿಗ್ಗಾಂವಿ: ತಾಲೂಕಿನ ತಿಮ್ಮಾಪುರ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿ-4ರ ಡಾಭಾ ಹಿಂದುಗಡೆ ಪರವಾನಗಿ ಇಲ್ಲದೆ ಅಕ್ರಮವಾಗಿ ಡೀಸೆಲ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ, 730 ಲೀ. ಡೀಸೆಲ್ ಮತ್ತು ಲಾರಿಯನ್ನು ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ.

ತಾಲೂಕಿನ ತಿಮ್ಮಾಪುರ ಗ್ರಾಮದ ಗುಲಾಬ ಇಬ್ರಾಹಿಂಸಾಬ ಹುಲಗೂರ, ಸೋಮಪ್ಪ ಮಾದೇವಪ್ಪ ಮೈಸೂರ, ರಮೇಶ ಪರಶುರಾಮ ಅವಲಿ ಮತ್ತು ಮಹಾರಾಷ್ಟ್ರದ ಲಾತೂರಿನ ಅನಿಲ ವಿಶ್ವನಾಥ ಕಾಂಬಳೆ ಬಂಧಿತರು ಎಂದು ತಿಳಿದುಬಂದಿದೆ.

ತಿಮ್ಮಾಪುರ ಕ್ರಾಸ್ ಡಾಭಾ ಬಳಿ ಅಕ್ರಮವಾಗಿ ಡೀಸೆಲ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ದಾವಣಗೆರೆ ಪೂರ್ವ ವಲಯ ಐಜಿಪಿಯವರ ವಿಶೇಷ ತಂಡದ ಡಿಎಸ್​ಪಿ ಜೆ.ಜೆ. ತಿರುಮಲೇಶ ಹಾಗೂ ಸಿಬ್ಬಂದಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 730ಲೀ. ಡೀಸೆಲ್ ತುಂಬಿದ ಕ್ಯಾನ್​ಗಳು ಮತ್ತು ಲಾರಿ ವಶಕ್ಕೆ ಪಡೆದಿದ್ದಾರೆ. ತಡಸ ಠಾಣೆಯಲ್ಲಿ ದೂರು ದಾಖಲಾಗಿದೆ. ತಡಸ ಠಾಣೆ ಪಿಎಸ್​ಐ ಮಂಜಪ್ಪ ಎಚ್., ಎಸ್.ಪಿ. ಗಂಜಿಗಟ್ಟಿ, ಎಂ.ಬಿ. ವಾಲಿಕಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net