ಅಕ್ಕನ ಬಳಗದ ಕಾರ್ಯ ದೇಶಕ್ಕೆ ಮಾದರಿ

bkt-13-3
ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬಿವಿವಿ ಸಂಘದ ಅಕ್ಕನ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮೈಸೂರಿನ ಮಾನಸಗಂಗೋತ್ರಿಯ ಜೀವರಸಾಯನ ಶಾಸö ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಭಾರತಿ ಪಿ. ಸಾಲಿಮಠ ೨೦೨೫ ನೇ ಸಾಲಿನ ಮಹಾದೇವಿ ಅಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on

ಬಾಗಲಕೋಟೆ: ಸ್ತ್ರೀ ಸ್ವಾತಂತ್ರ‍್ಯ- ಸಮಾನತೆ, ಸ್ತ್ರೀ ಜಾಗೃತಿ ಸಬಲೀಕರಣ ಮುಂತಾದ ಸ್ತ್ರೀ ಪರ ಸಂಘಟನೆ ಉದ್ದೇಶದಿಂದ ೧೯೩೮ ರಲ್ಲಿ ಸ್ಥಾಪನೆಗೊಂಡ ಬಿವಿವಿ ಸಂಘದ ಅಕ್ಕನ ಬಳಗ ದೇಶಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಭಾನುವಾರ ಬಿವಿವಿ ಸಂಘದ ಅಕ್ಕನ ಬಳಗದ ೮೭ ನೇ ವಾರ್ಷಿಕೋತ್ಸವ ಹಾಗೂ ಅಕ್ಕಮಹಾದೇವಿ ಜಯಂತಿ ಮತ್ತು ಮಹಾದೇವಿ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿವಿವಿ ಸಂಘದ ಅಕ್ಕನ ಬಳಗ ಬಾಗಲಕೋಟೆಯಲ್ಲಿ ೧೯೩೮ ರಲ್ಲಿಯೇ ಸ್ಥಾಪಿತವಾದ ಪ್ರಥಮ ಮಹಿಳಾ ಸಂಘಟನೆಯಾಗಿದ್ದು, ಇಂದು ೮೭ ನೇ ವಾರ್ಷಿಕೋತ್ಸವ ಆಚರಿಸುಕೋಳ್ಳುತ್ತಿರುವ ಹೆಮ್ಮೆಯ ವಿಷಯ. ಇಲ್ಲಿನ ಸಂಘಟಿತ ಕಾರ್ಯ, ಸಾವಿರಾರು ಮಹಿಳೆಯರಿಗೆ ಸಾವಲಂಬಿ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಂತಿದೆ ಎಂದರು.

ಅಲ್ಲದೆ ಮಹಿಳೆಯರಿಗೆ ಸ್ವಯಂ ಉದ್ಯೋಕ್ಕಾಗಿ ಇಲ್ಲಿ ಟ್ರೆÊಲರಿಂಗ್ ತರಬೇತಿಗಳು ನಡೆಯುತ್ತಿವೆ. ಅಲ್ಲದೆ ಜಿಲ್ಲೆಯಲ್ಲೆ ಮೊದಲ ಬಾರಿಗೆ ಶಿಶು ವಿಹಾರವನ್ನು ಸ್ಥಾಪಿಸಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದೆ. ಈಗ ಆಧುನಿಕತೆಯ ತಕ್ಕಂತೆ ಅಕ್ಕ ಶೈನಿಂಗ್ ಸ್ಟಾರ್ ಆಗಿ ಪರಿವರ್ತನೆಗೊಂಡು ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದೆ. ಸದಾ ಮಹಿಳೆಯರ ಸಮಾನತೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದು, ದೇಶದಲ್ಲಿ ಇದೊಂದು ಮಾದರಿ ಮಹಿಳಾ ಸಂಘಟನೆಯಾಗಿದೆ ಎಂದು ಬಣ್ಣಿಸಿದರು.

ಅಕ್ಕ ಪ್ರಶಸ್ತಿ ಸ್ವೀಕರಿಸಿ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಸಸ್ಯಶಾಸ್ತç ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಭಾರತಿ ಸಾಲಿಮಠ ಮಾತನಾಡಿ, ಅಕ್ಕನ ಬಳಗ ಕಾರ್ಯ ಚಟುವಟಿಕೆ ಶ್ಲಾಘನೀಯವಾಗಿದ್ದು, ಅದರಲ್ಲೂ ಇಲ್ಲಿ ಮಹಿಳೆಯರು ರುದ್ರ ಹೇಳುವುದು ಮತ್ತಷ್ಟು ವಿಶೇಷವಾಗಿದ್ದೆ. ನಾನು ಕೂಡಾ ರುದ್ರ ಕಲಿಯುತ್ತೆನೆ ಎಂದ ಅವರು, ಈ ಭಾಗದ ಶೈಕ್ಷಣಿಕೆ ಕ್ಷೇತ್ರ ರಾಜ್ಯದ ತುಂಬೆಲ್ಲಾ ಹೆಸರುವಾಸಿಯಾಗಿದೆ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ದೂರ ದೃಷ್ಠಿ ನಿಜವಾಗಲು ಸಮರ್ಥನಿಯ ಎಂದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮಾತನಾಡಿ, ಅಕ್ಕನ ಬಳಗ ಈ ಭಾಗದ ಮಹಿಳೆಯರಲ್ಲಿ ಶೈಕ್ಷಣಿಕ ಅರಿವು, ಮಹಿಳೆಯರಲ್ಲಿ ಸಮಾನತೆ, ಸಾವಲಂಬಿಯಾಗಿ ಬದುಕಲು ಅನೇಕ ತರಬೇತಿಗಳನ್ನು ನೀಡಿ ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿದೆ. ಬಿವಿವಿ ಸಂಘದ ಅವಿಭಾಜ್ಯ ಅಂಗವಾಗಿರುವ ಅಕ್ಕನ ಬಳಗ ಸಂಘದ ಸಾಂಸ್ಕೃತಿಕ ಮಹಿಳಾ ಸಂಘಟನೆಯಾಗಿದೆ ಎಂದು ತಿಳಿಸಿದರು.

ಇಳಕಲ್ಲ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಅಕ್ಕನ ಮಹಾದೇವಿಯು ಇಂದಿನ ಮಹಿಳೆಯರಿಗೆ ಆದರ್ಶವಾಗಿದ್ದು, ಆಕೆಯ ತತ್ವದಾರ್ಶಗಳ ಅನುಗುಣವಾಗಿ ಅಕ್ಕನ ಬಳಗ ಬೆಳೆದು ಬಂದಿರುವುದು ಶ್ಲಾಘನೀಯ. ಮಹಿಳೆಯರಿಗೆ ಮಹಿಳೆರಿಂದಲೇ ಶಕ್ತಿ ತುಂಬುವ ಇಂಥ ಕಾರ್ಯಕ್ರಮಗಳು ಇನ್ನು ಹೆಚ್ಚಾಗಲಿ ಎಂದು ಹೇಳಿದರು.

ಅಕ್ಕನ ಬಳಗದ ಅಧ್ಯಕ್ಷರಾದ ನಿರ್ಮಲಾ ಹಲಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಿ ಅಕ್ಕ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷೆ ರಾಜೇಶ್ವರಿ ವಿ. ಚರಂತಿಮಠ, ಅಕ್ಕನ ಬಳಗದ ಗೌರವಾಧ್ಯಕ್ಷೆ ಡಾ.ಅನಸೂಯಾ ಕೆರೂಡಿ, ನಗರಸಭೆ ಅಧ್ಯಕ್ಷತೆ ಸವಿತಾ ಲಂಕೆನ್ನವರ, ಸದಸ್ಯೆ ರೇಖಾ ಕಲಬುರಗಿ, ವಿಜಯಲಕ್ಷಿ÷್ಮÃ ಭದ್ರಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net