ಅಕ್ಕತಂಗೇರಹಾಳದಲ್ಲಿ ಜೋಡಿ ಕೊಲೆ

Children murder
Published on

ಬೆಳಗಾವಿ: ಗೋಕಾಕ ತಾಲೂಕಿನ ಅಕ್ಕತಂಗೇರಹಾಳದ ಗ್ರಾಮದಲ್ಲಿ ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ್ನು ಪತಿ ಮಾರಕಾಸದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಗ್ರಾಮದ ಮಲ್ಲಿಕಾರ್ಜುನ ಜಗದಾರ (40), ರೇಣುಕಾ ಮಾಳಗಿ(42) ಕೊಲೆಗೀಡಾದವರು. ಜೋಡಿ ಕೊಲೆ ಮಾಡಿರುವ ರೇಣುಕಾಳ ಪತಿ ಯಲ್ಲಪ್ಪ ಮಾಳಗಿ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿದ್ದ ರೇಣುಕಾಳನ್ನು ಮೊದಲು ಕೊಲೆ ಮಾಡಿದ್ದಾನೆ.

ಬಳಿಕ ಮಲ್ಲಿಕಾರ್ಜುನ ಮನೆಗೆ ಹೋಗಿ ಆತನನ್ನೂ ಕೊಚ್ಚಿ ಕೊಲೆ ಮಾಡಿದ್ದಾನೆ. ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಡಹಗಲೇ ನಡೆದ ಜೋಡಿ ಕೊಲೆಯಿಂದ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net