ಅಕಾಲಿಕ ಮಳೆ ಹಾನಿ ಪರಿಶೀಲನೆ

14 YLP 01
Published on

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಭಾಗದಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ಪ್ರದೇಶಗಳಿಗೆ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

ಎಪ್ಪತ್ತು ಚೀಲಕ್ಕೂ ಹೆಚ್ಚು ಭತ್ತ ಮತ್ತು ಹಸುಗಳ ಮೇವಿಗಾಗಿ ಇರಿಸಿದ್ದ ಒಣ ಹುಲ್ಲನ್ನು ಕಳೆದುಕೊಂಡ ರೈತರ ಹೊಲಗಳಿಗೆ ಅಧಿಕಾರಿಗಳು ಭೇಟಿ ನೀಡಿದರು.

ಕೃಷಿ ಇಲಾಖೆಯ ಅಧಿಕಾರಿ ಪ್ರಮೀಳಾ ಎಸ್. ಗೋಡಸೆ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರಕಾಶ ಎಸ್. ಸಾಸನೂರ, ಗ್ರಾಮ ಲೆಕ್ಕಾಧಿಕಾರಿ ಸವಿತಾ ಭಜಂತ್ರಿ, ಗ್ರಾಮ ಸಹಾಯಕ ನಾಗರಾಜ ನಾಯ್ಕ, ಗ್ರಾ.ಪಂ ಸದಸ್ಯ ಗ.ರಾ.ಭಟ್ಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net