ಅಕಾಲಿಕ ಮಳೆ ತಂದ ಆತಂಕ

6ANKOLA1
Published on

ಹೊನ್ನಾವರ: ತಾಲೂಕಿನ ವಿವಿಧೆಡೆ ಬುಧವಾರ ಅಕಾಲಿಕ ಮಳೆಯಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

ತಾಲೂಕಿನ ಚಂದಾವರ, ಮಲ್ಲಾಪುರ, ಕಡ್ನೀರು, ಹೊದ್ಕೆ ಶಿರೂರು, ಹಳ್ಳಿಮೂಲೆ, ಕಡತೋಕಾ ಮತ್ತಿತರೆಡೆ ಮಳೆಯಾಗಿದೆ. ಅಕಾಲಿಕ ಮಳೆಯಿಂದಾಗಿ ಒಣಮೇವಿನ ಗೊಣಬೆ, ಮನೆ ಮಹಡಿಯಲ್ಲಿ ಒಣಗಿಸಲು ಹಾಕಲಾದ ಅಡಕೆ ಹಾಳಾಗಿದೆ.

ಗೇರು ಮತ್ತು ಮಾವಿನ ಹೂವು ಉದುರಿ ಫಸಲು ನಾಶವಾಗುವ ಸಾಧ್ಯತೆ ಇದೆ. ಅಕಾಲಿಕ ಮಳೆ ರೈತ ವಲಯದಲ್ಲಿ ಆತಂಕ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net