ಅಂಬೇಡ್ಕರ್ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯ

28 SARAG 3
filter: 0; fileterIntensity: 0.000000; filterMask: 0; captureOrientation: 0; shaking: 0.042898; highlight: 1; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 38;
Published on

ಸರಗೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಬ್ಬ ಆಧ್ಯಾತ್ಮಿಕ ನಾಯಕ. ಶೋಷಿತರು, ದಲಿತರು ಮುಖ್ಯವಾಹಿನಿಗೆ ಬರಲು ಅವರು ಕಾರಣಕರ್ತರು. ಅವರ ಸ್ಮರಣೆ ಮಾಡುವುದು, ತತ್ವಾದರ್ಶ ಮೈಗೂಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪೊಲೀಸ್ ಕಾನ್‌ಸ್ಟೆಬಲ್ ಸುನೀಲ್‌ಕುಮಾರ್ ತಿಳಿಸಿದರು.

ತಾಲೂಕಿನ ಹಾದನೂರು ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಅಂಬೇಡ್ಕರ್ ಜಯಂತಿ ಭಾರತದಾದ್ಯಂತ ದಲಿತ ಸಮುದಾಯಗಳಿಗೆ ಆಳವಾದ ಭಾವನಾತ್ಮಕ ಮತ್ತು ರಾಜಕೀಯ ಮಹತ್ವವನ್ನು ಹೊಂದಿದೆ. ಇದು ಜಾತಿ ಆಧಾರಿತ ಅಸಮಾನತೆಗಳ ವಿರುದ್ಧ ನಡೆಯುತ್ತಿರುವ ಹೋರಾಟದ ಸ್ಮರಣೆ ಹಾಗೂ ಸಾಮಾಜಿಕ, ಆರ್ಥಿಕ ಸುಧಾರಣೆಗಳಿಗೆ ಸ್ಫೂರ್ತಿ ಎಂದರು.

ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಉಪ ಸಂಚಾಲಕ ದೊಡ್ಡಸಿದ್ದು ಮಾತನಾಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನಿರಿಸಿ ಮಂಗಳವಾದ್ಯ, ನಗಾರಿ, ತಮಟೆ ಮೂಲಕ ಮೆರವಣಿಗೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿತ್ತು. ರಾಮದಾಸ್-ನೇತ್ರಾವತಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಗ್ರಾಮದ ಗಡಿ ಯಜಮಾನ ರಾಜಯ್ಯ, ಯಜಮಾನರಾದ ರಾಜೇಶ್, ಸಿದ್ದರಾಜು, ಗ್ರಾಪಂ ಸದಸ್ಯ ಶಿವರಾಜು, ರತ್ನಮ್ಮ ರಾಜೇಶ್, ಭಾಗ್ಯಕೆಂಪಸಿದ್ದ, ಮಾಜಿ ಯಜಮಾನರಾದ ಮಹದೇವಸ್ವಾಮಿ, ನಾಗರಾಜು, ಮುಖಂಡರಾದ ಪುಟ್ಟಸ್ವಾಮಿ, ಎಚ್.ಕೆ.ಸಿದ್ದರಾಜು, ಚಲುವರಾಜು, ಪುಟ್ಟರಾಜು, ಚಿಕ್ಕಣ್ಣ, ಮಹೇಶ್, ಶಿವಣ್ಣ, ವಣಕಾರ, ಶಶಿಕುಮಾರ್, ನಾಗೇಂದ್ರ, ವೃಷಭೇಂದ್ರ, ಸಣ್ಣಸ್ವಾಮಿ, ಶಿವರಾಜು, ರವಿಕುಮಾರ್, ರಮೇಶ್, ರೇವಣ್ಣ, ಮದನ್, ಸಿದ್ದರಾಜು, ಪ್ರಸನ್ನ ಕುಮಾರ್, ನಾಗೇಂದ್ರ, ಬಿಡ್ಡಯ್ಯ, ಸಿದ್ದಯ್ಯ, ನಾಗರಾಜು, ಸುರೇಶ್ , ಜಾಕಿ ಪ್ರತಾಪ್, ಬಸವಣ್ಣ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net