

ಬಾಗಲಕೋಟೆ: ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರು ಭಾರತೀಯ ಸಂವಿಧಾನ ರಚನೆಯಲ್ಲಿ ಅನೇಕ ಸುಧಾರಣೆಗಳನ್ನು ತಂದರು. ಅವರು ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ‍್ಯಕ್ಕೆ ಬಲ ನೀಡುವ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದ್ದು, ಈ ತತ್ವಗಳೇ ಸಮ ಸಮಾಜದ ನಿರ್ಮಾಣಕ್ಕೆ ದಾರಿ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ಜಾತಿ ವ್ಯವಸ್ಥೆಯ ನೋವನ್ನು ಅನುಭವಿಸಿ, ಅದನ್ನು ಮೆಟ್ಟಿ ನಿಂತು ಉನ್ನತ ಶಿಕ್ಷಣವನ್ನು ಪಡೆದಿದ್ದು, ನಿಜಕ್ಕೂ ಸ್ಪೂರ್ತಿದಾಯಕ. ತಮ್ಮ ಈ ಅನುಭವದ ಆಧಾರದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ಧ್ಯೇಯದೊಂದಿಗೆ ಸಂವಿಧಾನ ರಚನೆ ಮಾಡಿ ದೇಶದಲ್ಲಿ ಬದಲಾವಣೆಗೆ ಕಾರಣರಾದರು ಎಂದರು.
ಅಂಬೇಡ್ಕರ ಅವರ ಕನಸು ಎಲ್ಲರಿಗೂ ಸಮಾನ ಹಕ್ಕುಗಳು ದೊರಕುವ ಸಮಾಜ ನಿರ್ಮಾಣವಾಗಬೇಕು ಎಂಬುದಾಗಿತ್ತು. ಮಹಿಳೆಯರಿಗೂ ಸಮಾನ ಗೌರವ, ಶಿಕ್ಷಣ ಹಾಗೂ ಅವಕಾಶಗಳು ಸಿಗಬೇಕು ಎಂಬುದು ಅವರ ದೃಷ್ಟಿಕೋನ. ಈಗಿನ ಸರ್ಕಾರ ಹಂತ ಹಂತವಾಗಿ ಸಾಕಾರಗೊಳಿಸುತ್ತಿದೆ. ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದು ಅಂಬೇಡ್ಕರ ಅವರ ಬಹುದೊಡ್ಡ ಕೊಡುಗೆ ಎಂದು ಹೇಳಿದರು.
ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಅಂಬೇಡ್ಕರ್ ಅವರು ತಾವು ಅನುಭವಿಸಿದ ಅಸಮಾನತೆಗಳನ್ನು ನಿಭಾಯಿಸಿ, ಎಲ್ಲರ ಸಮಾನತೆಯಿಗಾಗಿ ತಮ್ಮ ಜೀವನವನ್ನು ಅರ್ಪಿಸಿದ ಮಹಾನ್ ವ್ಯಕ್ತಿ. ಅವರ ಓದಿಗೆ ಯಾವುದೇ ಜಾತಿ ಧರ್ಮದ ಮೀತಿಯಿರಲಿಲ್ಲ. ಕುರಾನ್, ಬೈಬಲ್, ಗೀತೆ ಎಲ್ಲವನ್ನು ಅಧ್ಯಯನ ಮಾಡಿದರು. ಪುಸ್ತಕ ಓದುವ ಅಭ್ಯಾಸ ಎಷ್ಟರ ಮಟ್ಟಿಗೆ ಇತ್ತು ಎಂದರೆ, ತಮ್ಮ ಮನೆಯಲ್ಲಿಯೇ ೫೦,೦೦೦ಕ್ಕೂ ಅಽಕ ಗ್ರಂಥಗಳನ್ನು ಹೊಂದಿದ ಗ್ರಂಥಾಲಯವಿಟ್ಟುಕೊAಡಿದ್ದರು ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಇಂದಿನ ಜನರು ಅಂಬೇಡ್ಕರವಾದಿಗಳೆAದು ಹೇಳಿಕೊಳ್ಳುವುದಕ್ಕಿಂತ ಅವರ ತತ್ವಗಳನ್ನು ಪಾಲಿಸುವದು ಮುಖ್ಯ. ಮೀಸಲಾತಿಯ ಹಕ್ಕು ಮತ್ತು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಕ್ಕಿರುವುದಕ್ಕೆ ಅಂಬೇಡ್ಕರ್ ಕಾರಣ ಎಂದು ತಿಳಿಸಿದರು.
ಪ್ರೊ.ಎನ್.ಆರ್. ಶಿವರಾಂ ಮಾತನಾಡಿ, ಅಂಬೇಡ್ಕರ ಅಸ್ಪÈಶ್ಯತೆ, ಜಾತಿ ತಾರತಮ್ಯ ಮುಂತಾದ ಬೇದ ಭಾವಗಳನ್ನು ದೂರ ಮಾಡಿ ಸಮಾಜವನ್ನು ಆರೋಗ್ಯವಂತಗೊಳಿಸಲು ವೈದ್ಯನಂತೆ ಕಾರ್ಯನಿರ್ವಹಿಸಿದರು. ಅವರು ಟೀಕೆ ಟಿಪ್ಪಣಿಗಳಿಲ್ಲದ, ಶುದ್ಧ ಪ್ರಾಮಾಣಿಕ ನಾಯಕರಾಗಿದ್ದರು ಎಂದು ಹೇಳಿದರು.
ಈ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಟ್ಟದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮತ್ತು ಉತ್ತಮ ಫಲಿತಾಂಶ ಸಾಧನೆಯ ವಿದ್ಯಾರ್ಥಿ ನಿಲಯದ ಅಽಕಾರಿಗಳಿಗೂ ಸನ್ಮಾನಿಸಲಾಯಿತು. ಜಿಲ್ಲಾಽಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ, ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಅಪರ ಜಿಲ್ಲಾಽಕಾರಿ ಅಶೋಕ್ ತೇಲಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕ್ಕೆನವರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಉಪಸ್ಥಿತರಿದ್ದರು.