ಅಂತಾರಾಷ್ಟ್ರೀಯ ಓದುವ ದಿನಕ್ಕೆ ಅರಿವು ಪ್ರಯತ್ನ

Published on

ಮಾಗಡಿ: ಅಂತಾರಾಷ್ಟ್ರ್ಟ್ರೀಯ ಓದುವ ದಿನ ಹಿನ್ನೆಲೆಯಲ್ಲಿ ಜೂ.19ರಂದು ಪಟ್ಟಣದ ವಾಸವಿ ಎಜುಕೇಷನ್ ಟ್ರಸ್ಟ್ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಓದುವ ಹವ್ಯಾಸ ಬೆಳೆಸಿಕೊಂಡರೆ ನೀವು ಬಯಸಿದ್ದು, ನಿಮಗೆ ಸಿಗುತ್ತದೆ ಎಂಬ ಹೊಸ ಪ್ರಯತ್ನಕ್ಕೆ ಮಕ್ಕಳನ್ನು ಪ್ರೇರೇಪಿಸುತ್ತಿದೆ. ಮಕ್ಕಳ ಗಮನ ಓದಿನ ಕಡೆ ಕಡಿಮೆಯಾಗಿ ಮೊಬೈಲ್ ದಾಸರಾಗುತ್ತಿರುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಈ ಬಗ್ಗೆ ಮಕ್ಕಳಲ್ಲಿ ಪ್ರಥಮವಾಗಿ ಅರಿವು ಮೂಡಿಸಲು ಮುಂದಾಗಿದೆ. ಜೂ.19 ರಂದು ಬೆಳಗ್ಗೆ ಶಾಲೆಯಿಂದ ಅರಿವಿನ ಬಗ್ಗೆ ಪ್ರಕಟಿಸಿರುವ ಪತ್ರವನ್ನು ಪಾಲಕರಿಗೆ ಹಾಗೂ ಸುತ್ತಮುತ್ತಲ ನಾಗರಿಕರಿಗೆ ತೋರಿಸಿ ಅಂತಾರಾಷ್ಟ್ರೀಯ ಓದುವ ದಿನದ ಶುಭಾಶಯ ತಿಳಿಸಿ, ಮೊಬೈಲ್ ನೋಡದೆ ಪಠ್ಯ ಪುಸ್ತಕ ಓದುವ ಬಗ್ಗೆ ಹಾಗೂ ನಾಗರಿಕರು ದಿನಪತ್ರಿಕೆ, ಕಥೆ, ಕಾದಂಬರಿ, ಗ್ರಂಥಗಳನ್ನು ಓದುವಂತೆ 1500 ಮಂದಿಗೆ ಅರಿವು ಮೂಡಿಸುವ ಹೊಸ ಪ್ರಯತ್ನದಲ್ಲಿದ್ದಾರೆ.

ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿ ಮೊಬೈಲ್ ನೋಡುವುದು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಯಿಂದ ಸಾಮಾಜಿಕವಾಗಿ ಜನಸಾಮಾನ್ಯರು ಓದುವ ಅಭ್ಯಾಸ ಬೆಳೆಸಲು ಅರಿವು ಮೂಡಿಸಲಾಗುತ್ತಿದೆ. | ವಸಂತ್ ಕುಮಾರ್ ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net