ಅಂತರಸಂತೆಯಲ್ಲಿ ಹನುಮ ಜಯಂತಿ ಸಂಭ್ರಮ

handpost
Published on

ಅಂತರಸಂತೆ: ಹ್ಯಾಂಡ್‌ಪೋಸ್ಟ್ ಸಮೀಪದ ಅಂತರಸಂತೆಯಲ್ಲಿ ಶುಕ್ರವಾರ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಜೈ ಹನುಮ ಜ್ಞಾನ ಗುಣಸಾಗರ ಶ್ಲೋಕವನ್ನು ಪಠಿಸುತ್ತಾ ಭಕ್ತರು ಉತ್ಸವ ಮೂರ್ತಿಯ ರಥವನ್ನು ದೇವಸ್ಥಾನದ ರಸ್ತೆಯಿಂದ ಪ್ರಾರಂಭಿಸಿದರು. ಹನುಮ ಬಳಗದ ಅಧ್ಯಕ್ಷರು ಪ್ರಸನ್ನ ಕುವಾರ್ ವಾತನಾಡಿ, ಹನುಮನ ಉತ್ಸವಕ್ಕೆ ಬಂದಿರುವಂತಹ ಭಕ್ತರು ಹನುಮನ ಕಪೆಗೆ ಭಾಗಿಯಾಗಿ ಆಶೀರ್ವಾದ ಪಡೆಯಬೇಕು. ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ಆಚರಣೆ ವಾಡಲಾಗುತ್ತಿದೆ ಎಂದರು.

ಕಾರ್ಯದರ್ಶಿ ಸುನೀಲ್ ವಾತನಾಡಿ, ಹನುಮ ಜಯಂತಿಯನ್ನು ಎರಡನೇ ಬಾರಿಗೆ ಆಚರಣೆ ವಾಡುತ್ತಿದ್ದೇವೆ. ಮುಂದಿನ ವರ್ಷ ಎಚ್.ಡಿ.ಕೋಟೆಯ ನಾನಾ ಭಾಗಗಳಲ್ಲಿ ಹನುಮ ಜಯಂತಿ ಆಚರಿಸಲಾಗುವುದು ಎಂದು ಹೇಳಿದರು.

ಚಂಡೆ, ನಗಾರಿ, ವೀರಗಾಸೆ, ಗೊಂಬೆ ಕುಣಿತ ಕಲಾತಂಡಗಳು ಉತ್ಸವಕ್ಕೆ ಮೆರುಗು ನೀಡಿದವು. ಹನುಮ ಭಕ್ತರು ಪ್ರಮುಖ ರಸ್ತೆಗಳಲ್ಲಿ ಹನುಮ ಉತ್ಸವ ಮೂರ್ತಿಯನ್ನು ರಥದ ಮೂಲಕ ಮೆರವಣಿಗೆ ವಾಡಿದರು.

ಕಷ್ಣ ನಾಯಕ್, ಪ್ರಸನ್ನ ಕುವಾರ್, ಕಿರಣ್ ಕುವಾರ್, ಕಾರ್ಯದರ್ಶಿ ಸುನೀಲ್, ದೀಕ್ಷಿತ್, ಅಖಿಲೇಶ್, ನಂದೀಶ್, ವಾರುತಿ ಗೌಡ, ಸಂತೋಷ್, ಮನು, ಹೊಸವಾಳ ಗಿರೀಶ್, ಶ್ರೀಧರ್, ಅನಿಲ್, ಕಾರ್ತಿಕ್, ನಟರಾಜು, ಮಹೇಶ್, ವಿಜಯ್, ಪ್ರಸನ್ನ, ಗಣೇಶ್, ರಾಘು, ಪ್ರಶಾಂತ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net