

ಬಾಗಲಕೋಟೆ: ಜಿಲ್ಲೆಯಲ್ಲಿ ಎಪ್ರೀಲ್ ೨೬ ಮತ್ತು ೨೭ ರಂದು ನಡೆಯಲಿರುವ ಮನೆಯಿಂದಲೇ ಮತದಾನಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿ, ಮೈಕ್ರೋ ಆಬ್ಜರವರ ಹಾಗೂ ವಿಡಿಯೋ ಗ್ರಾಫರ್‌ಗಳಿಗೆ ಮಂಗಳವಾರ ತರಬೇತಿ ನೀಡಲಾಯಿತು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ತರಬೇತಿಗೆ ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಚಾಲನೆ ನೀಡಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗವು ಇತ್ತೀಚಿನ ಚುನಾವಣೆಗಳಲ್ಲಿ ಪ್ರತಿಯೊಬ್ಬರು ಚುನಾವಣೆಯಲ್ಲಿ ಮತದಾನ ಮಾಡಲಿ ಎಂಬ ಉದ್ದೇಶದಿಂದ ೮೫ ವರ್ಷ ಮೇಲ್ಪಟ್ಟವರಿಗೆ, ಅಂಗವೈಕಲ್ಯಯುಳ್ಳವರಿಗೆ ಹಾಗೂ ಕೋವಿಡ್ ಪೀಡಿತರಿಗೆ ಮನೆಯಿಂದಲೇ ಅಂಚೆ ಮತಪತ್ರದ ಮೂಲಕ ಮತಚಲಾಯಿಸುವ ವ್ಯವಸ್ಥೆ ಕಲ್ಪಿಸಿದೆ ಎಂದರು.
ಸಂಪೂರ್ಣ ತರಬೇತಿ ಪಡೆದುಕೊಂಡು ಮನೆಯಿಂದಲೇ ಮತದಾನ ಕಾರ್ಯವನ್ನು ಯಶಸ್ವಿಗೊಳಿಸಲು ತಿಳಿಸಿದ ಅವರು ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ವ್ಯವಸ್ಥೆಗೆ ಇಬ್ಬರು ಪೋಲಿಂಗ್ ಅಧಿಕಾರಿಗಳು, ತಲಾ ಒಬ್ಬರಂತೆ ಮೈಕ್ರೋ ಆಬ್ಸರ್ವರ್, ಪೊಲೀಸ್ ಅಧಿಕಾರಿ, ವಿಡಿಯೊಗ್ರಾಫರ್ ಒಳಗೊಂಡ ೯೭ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ನೆಯಿಂದಲೇ ಅಂಚೆ ಮತಪತ್ರದ ಮೂಲಕ ಮತಚಲಾಯಿಸುವ ವ್ಯವಸ್ಥೆ ಕುರಿತು ಸಂಪನ್ಮೂಲ ವ್ಯಕ್ತಿಯಾದ ಯಡಹಳ್ಳಿ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪಾಂಡುರAಗ ಆದಾಪೂರ ತರಬೇತಿ ನೀಡಿದರು. ಮನೆಯಿಂದಲೇ ಮತದಾನ ದಿನದಂದು ತಮ್ಮ ಬರುವಿಕೆಯನ್ನು ಎಸ್.ಎಂ.ಎಸ್ ಇಲ್ಲವೇ ಬಿ.ಎಲ್.ಓ ಮೂಲಕ ಮಾಹಿತಿ ನೀಡಬೇಕು. ಮತದಾನಾಧಿಕಾರಿ ಮೊದಲ ಮತದಾರ ಮನೆಗೆ ಮೊದಲ ಸಲ ಲಭ್ಯವಿಲ್ಲದಿದ್ದಲ್ಲಿ ಮುಂದಿನ ದಿನಾಂಕವನ್ನು ತಿಳಿಸಿ ಬರಬೇಕು. ೨ನೇ ದಿನ ಮತದಾರ ಲಭ್ಯವಿಲ್ಲದಿದ್ದರೆ ಮತ್ತೊಮ್ಮೆ ಹೋಗುವ ಅವಶ್ಯಕತೆ ಇರುವದಿಲ್ಲ ಎಂದು ತಿಳಿಸಿದರು.
ಮತದಾನ ಗೌಪ್ಯವಾಗಿ ಕಾಪಾಡಿಕೊಳ್ಳಲು ಕಂಪಾರ್ಟಮೆಟ್ ಬಳಸಬೇಕು. ಮತದಾನದ ಪ್ರತಿಯೊಂದು ಂ ವಿಡಿಯೋ ರೆಕಾರ್ಡ ಮಾಡುವರದ ಜೊತೆಗೆ ಚುನಾವಣಾ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ತಿಳಿಸಿದರು. ಅಲ್ಲದೇ ಪೋಲಿಂಗ್ ಅಧಿಕಾರಿ ಮೈಕ್ರೋ ಆಬ್ಜರವ ಹಾಗೂ ವಿಡಿಯೋ ಗ್ರಾಫರ ಕರ್ತವ್ಯಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನಿತ್ ಇದ್ದರು.