ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ

IMG-20250428-WA0117
Published on

ಹೊಳೆನರಸೀಪುರ: ಅಂಗವಿಕಲರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ತಾಲೂಕು ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ತ್ರಿಚಕ್ರ ಮೋಟಾರ್ ವಾಹನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು 5.46 ಲಕ್ಷ ರೂ. ವೆಚ್ಚದಲ್ಲಿ ಐದು ವಾಹನಗಳನ್ನು ಖರೀದಿಸಿದ್ದು ಹಳೆಯಕೋಟೆ ಹೋಬಳಿಯ ಫಲಾನುಭವಿಗಳಿಗೆ ಎರಡು, ಹಳ್ಳಿ ಮೈಸೂರು ಹೋಬಳಿಯ ಫಲಾನುಭವಿಗಳಿಗೆ ಎರಡು, ಕಸಬಾ ಹೋಬಳಿಯ ಫಲಾನುಭವಿಗೆ ಒಂದು ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಫಲಾನುಭವಿಗಳಾದ ಕಸಬಾ ಹೋಬಳಿ ಪಡುವಲಹಿಪ್ಪೆ, ಹಳೆಕೋಟೆ ಹೋಬಳಿ ಬನಕುಪ್ಪೆ, ಕಾಮೇನಹಳ್ಳಿ, ಹಳ್ಳಿ ಮೈಸೂರು ಹೋಬಳಿ ಟಿ.ಮಾಯಗೌಡನಹಳ್ಳಿ, ಮಂಗಳವಾಡಿ ಗ್ರಾಮದ ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಲಾಯಿತು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ್, ಸಹಾಯಕ ನಿರ್ದೇಶಕ ಎಚ್.ಎನ್.ನಾಗೇಶ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮೀನಾ, ಸತ್ಯನಾರಾಯಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net