

ಬಾಗಲಕೋಟೆ: ಬದುಕಿನಲ್ಲಿ ಅಂಗವಿಕಲತೆ, ದೈಹಿಕ ತೊಂದರೆಗಳಿAದ ಕೊರತೆ ಎಂಬ ಭಾವನೆ ಉಂಟಾಗಿದ್ದರೂ ಮಾನಸಿಕವಾಗಿ ಬಹಳಷ್ಟು ಜ್ಞಾನ ಅಂಗವಿಕಲರು ಹೊಂದಿರುತ್ತಾರೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನವನಗರದ ಕಲಾಭವನದಲ್ಲಿ ಬುಧವಾರ ಸಾಮಾಜಿಕ ಅಽಕಾರಿತ ಶಿವಿರ್, ಭಾರತ ಸರ್ಕಾರದ ಅಡಿಪ್ ಯೋಜನೆಯಡಿಯಲ್ಲಿ ದಿವ್ಯಾಂಗ ಜನರಿಗೆ ಮತ್ತು ರಾಷ್ಟಿçÃಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನ ಸಾಗಿಸುವ ಪ್ರತಿಯೊಬ್ಬರಲ್ಲಿ ಒಂದೊAದು ಜ್ಞಾನವಿರುತ್ತದೆ. ಒಂದನ್ನು ಕೊಟ್ಟು ಮತ್ತೊಂದನ್ನು ದೇವರು ನೀಡಿರುತ್ತಾರೆ ಎಂದರು.
ಅ0ಗವಿಕಲರು ಎಂದು ಕರೆದರೆ ನೋವನ್ನು ತರುತ್ತದೆ ಎಂಬ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ದಿವ್ಯಾಂಗರು ಎಂದು ನಾಮಕರಣ ಮಾಡಿದ್ದಾರೆ. ಇಲಾಖೆಯ ಅಽಕಾರಿಗಳು ಮೇಲಿಂದ ಮೇಲೆ ಜಿಲ್ಲೆಯಲ್ಲಿ ಸರ್ವೆಕಾರ್ಯ ಕೈಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯ ಒದಗಿಸುವ ಕಾರ್ಯವಾಗಬೇಕು. ದಿವ್ಯಾಂಗರಿಗಾಗಿಯೇ ವಿಶೇಷವಾದ ಸೌಲಭ್ಯಗಳಿಗೆ. ಅವುಗಳನ್ನು ದೊರೆಕಿಸುವಲ್ಲಿ ಜನಪ್ರತಿನಿಽಗಳು ಅಽಕಾರಿಗಳು ಸಿದ್ದರಿದ್ದೇವೆ. ಇವುಗಳ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.
ರಾಷ್ಟಿçÃಯ ವಯೋಶ್ರೀ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೂ ಸಹ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ. ವೈಜ್ಞಾನಿಕವಾಗಿ ತಯಾರಿಸಲ್ಪಟ್ಟ ಸಾಧನ ಸಲಕರಣೆಗಳು ಉಪಯುಕ್ತವಾಗಲಿವೆ. ಇವುಗಳ ಬಳಕೆಯಿಂದ ಸಾಮಾನ್ಯ ಜನರ ಹಾಗೆ ತಾವು ಸಹ ಮುಖ್ಯವಾಹಿಸಿಗೆ ಬರಬಹುದಾಗಿದೆ. ಅಲಿಂಕೋ ಸಂಸ್ಥೆಯಿAದ ನೀಡಲಾಗಿರುವ ಸಲಕರಣೆ ಒಳ್ಳೆಯ ರೀತಿಯಿಂದ ಇಟ್ಟುಕೊಳ್ಳಬೇಕು. ಇದರಿಂದ ಅವುಗಳ ಬಳಕೆ ಮೂಲಕ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದಿವ್ಯಾಂಗರಿಗೆ ವಿವಿಧ ಸಾಧನೆ ಸಲಕರಣೆಗಳನ್ನು ನೀಡಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಸಾಮಾನ್ಯ ಜನರಂತೆ ಸಮಾಜದಲ್ಲಿ ಮುಂದೆ ಬರಬೇಕು. ಅಂಗವಿಕಲರಿಗೆ ದೇವರು ಕೊರತೆಯ ಜೊತೆಗೆ ಅದ್ಬುತವಾದ ಶಕ್ತಿಯನ್ನು ಕೊಟ್ಟಿರುತ್ತಾನೆ. ಅದನ್ನು ಗುರುತಿಸಿಕೊಂಡು ಮುಖ್ಯವಾಹಿನಿಗೆ ಬರಲು ತಿಳಿಸಿದರು.
ಜಿಲ್ಲಾಽಕಾರಿ ಜಾನಕಿ ಕೆ.ಎಂ ಮಾತನಾಡಿ, ಅಂಗವಿಕಲರಿಗೆ ಅಗತ್ಯತೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಅಲಿಂಪೋ ಸಂಸ್ಥೆಯ ಮೂಲಕ ವಿವಿಧ ಸಾಧನ ಸಲಕರಣೆಗಳನ್ನು ೮ ನೂರಕ್ಕು ಹೆಚ್ಚು ಜನರಿಗೆ ವಿತರಣೆ ಮಾಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಂಗವಿಕಲರಾಗಿ ಹುಟ್ಟುತ್ತಿರುವುದು ಅವರ ಸಮಸ್ಯೆ ಅಲ್ಲ. ಮೂಡಬಂಬಿಕೆ ಕಡಿಮೆಯಾಗಬೇಕು. ಒಳ ಸಂಬAಧಗಳಲ್ಲಿ ಮದುವೆಯಾಗುವದನ್ನು ನಿಲ್ಲಿಸುವ ಮೂಲಕ ವಿಕಲತೆಯನ್ನು ಕಡಿಮೆ ಮಾಡಬಹುದಾಗಿದೆ. ಬಾಲ್ಯವಿವಾಹ ಆಗುವದನ್ನು ತಡೆಯಬೇಕು. ಅಂಗವಿಕಲರಿಗೆ ನೈತಿಕ ಸ್ಥೆÊರ್ಯ ಕುಗ್ಗಿಸುವ ಕೆಲಸ ಯಾರು ಮಾಡಬಾರದು ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಸವಿತಾ ಕಾಳೆ ಮಾತನಾಡಿ, ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ಜಿಲ್ಲೆಯಲ್ಲಿ ೧೦.೩೯ ಲಕ್ಷ ರೂ.ಗಳ ವೆಚ್ಚದಲ್ಲಿ ೬೫೩ ಅಂಗವಿಕಲರಿಗೆ ೧೨೧೦ ಸಾಧನ ಸಲಕರಣೆಗಳು ಹಾಗೂ ೯೨.೧೬ ಲಕ್ಷ ವೆಚ್ಚದಲ್ಲಿ ೧೨೪ ಹಿರಿಯ ನಾಗರಿಕರಿಗೆ ೬೧೫ ಸಾಧನೆ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಅಂಗವಿಕಲರಿಗೆ ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಸಾಧನ ಸಲಕರಣೆಗಳು ಅನುಕೂಲವಾಗಲಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದಿವ್ಯಾಂಗರಿಗೆ ವಿವಿಧ ಸಾಧನ ಸಲಕರೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಅಲಿಂಕೋ ಸಂಸ್ಥೆಯ ಮುಖ್ಯಸ್ಥ ಅಂಕಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.