ಅಂಗನವಾಡಿಗಳಿಗೆ ಕುಕ್ಕರ್ ವಿತರಣೆ

IMG-20250328-WA0093_1
Published on

ಸಾಲಿಗ್ರಾಮ: ಪ್ರತಿ ವರ್ಷದಂತೆ ಈ ವರ್ಷವೂ 9 ಅಂಗನವಾಡಿಗಳಿಗೆ ಉಚಿತವಾಗಿ ಕುಕ್ಕರ್ ನೀಡುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪ್ಪಶ್ರೀ ಅನಿಫ್ ತಿಳಿಸಿದರು.

ಅಂಗನವಾಡಿಯಲ್ಲಿ ಪಂಚಾಯಿತಿ ವತಿಯಿಂದ ಕುಕ್ಕರ್ ವಿತರಿಸಿ ಮಾತನಾಡಿದ ಅವರು, ಪಿಡಿಒ ಪ್ರತಾಪ್ ಅಭಿವೃದ್ಧಿ ಅಧಿಕಾರಿಯಾಗಿ ಬಂದ ಮೇಲೆ ಸಾಕಷ್ಟು ಕೆಲಸಗಳು ಆಗುತ್ತಿದೆ. ಇನ್ನು ಸಾಕಷ್ಟು ಕೆಲಸಗಳು ಆಗಬೇಕಿದೆ. ತುರ್ತಾಗಿ ಯಾವ ಗ್ರಾಮಗಳಲ್ಲಿ ನೀರು, ರಸ್ತೆ, ಚರಂಡಿ ಆಗಬೇಕಿದೆ ಅಂತಹವುಗಳನ್ನು ತುರ್ತಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಪಿಡಿಒ ಪ್ರತಾಪ್ ಮಾತನಾಡಿ, ಐದು ವರ್ಷಗಳಿಂದ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಗಳಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನ ಕಲ್ಪಿಸಿಕೊಡಲು ಪ್ರತಿ ವರ್ಷ ವರ್ಗ ಒಂದರ ಹಣಕಾಸಿನಲ್ಲಿ ಆರ್ಥಿಕ ಸಹಾಯ ಮಾಡುತ್ತಿದ್ದೇವೆ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ದಿನೇಶ್, ಮುಂಜನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಹದೇವನಾಯಕ, ಮಂಗಳಾ ಶಿವರಾಮನಾಯಕ, ಚಿಕ್ಕಭೇರ್ಯ ಗ್ರಾಪಂ ಸದಸ್ಯ ಯತಿರಾಜ್, ಕಾವಲ್ ಹೊಸೂರು ಗ್ರಾಪಂ ಸದಸ್ಯ ಚಂದ್ರೇಗೌಡ, ಗುಳುವಿನ ಅತ್ತಿಗುಪ್ಪೆ ಗ್ರಾಪಂ ಸದಸ್ಯೆ ಜಯಮ್ಮ, ಸಿಬ್ಬಂದಿ ಕಾರ್ಯದರ್ಶಿ ರಮೇಶ್, ಕಂಪ್ಯೂಟರ್ ಆಪರೇಟರ್ ಸಂಜು, ಸಹಾಯಕ ಮಂಜಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net