ಅ.೨೯ ರಂದು ಮಹಿಳಾ ಮಹಾ ಸಮಾವೇಶ

bkt-27-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತಂಜಲಿ ಯೋಗ ಸಮಿತಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ವರಿಷ್ಠ ಪ್ರಭಾರಿ ಭವರ್‌ಲಾಲ್ ಆರ್ಯಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪತಂಜಲಿ ಯೋಗ ಸಮಿತಿ ಸಂಚಾಲಕರದ ಎಚ್.ಎಚ್.ಇನಾಂದಾರ, ಸೀಮಾ ಮಣ್ಣೂರ, ಆರತಿ ಕಾನಗೋ, ಮಾಲತಿ ಕೆ. ಇದ್ದರು.
Published on

ಬಾಗಲಕೋಟೆ: ಮಹಿಳಾ ಪತಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ಅ.೨೯ರಂದು ಬೆಳಗ್ಗೆ ೯ ಗಂಟೆಗೆ ನವನಗರದ ಕಲಾಭವನದಲ್ಲಿ ಮಹಿಳಾ ಮಹಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಸಮಿತಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ವರಿಷ್ಠ ಪ್ರಭಾರಿ ಭವರ್‌ಲಾಲ್ ಆರ್ಯಜಿ ಹೇಳಿದರು.
ಮಹಿಳಾ ಸಮಾವೇಶಕ್ಕೆ ೧೬ ಜಿಲ್ಲೆಯಿಂದ ಪ್ರತಿನಿಧಿಗಳು ಭಾಗವಹಿಸಲಿದ್ದು, ಪ್ರತಿ ಜಿಲ್ಲೆಯಿಂದ ೧೦೦ ಮಹಿಳೆಯರು ಸೇರಿದಂತೆ ೧೬೦೦ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಲಿದ್ದು, ನಗರ ಸೇರಿದಂತೆ ಬಾಗಲಕೋಟೆ ಜಿಲ್ಲೆಯಿಂದ ೨೦೦೦ ಸಾವಿರ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳಾ ಪತಂಜಲಿ ಯೋಗ ಸಮಿತಿ ಉತ್ತರ ಕರ್ನಾಟಕದ ರಾಜ್ಯ ಮುಖ್ಯ ಪ್ರಭಾರಿ ಆರತಿ ಕಾನಗೋ ಮಾತನಾಡಿ, ಸಮಾವೇಶದಲ್ಲಿ ಭಾರತೀಯ ಸಂಸ್ಕೃತಿ, ಯೋಗ , ಹೆಣ್ಣುಮಕ್ಕಳ ಆಹಾರ ಪದ್ಧತಿ ಕುರಿತು ಮಾಹಿತಿ ನೀಡಲಾಗುವುದು. ಬೆಳಗ್ಗೆ ೯ ರಿಂದ ೧೦ ಗಂಟೆಯವರೆಗೆ ಯೋಗಗುರು ರಾಮದೇವ ಬಾಬಾ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಉಪನ್ಯಾಸ ನೀಡಲಿದ್ದು, ನಂತರ ೧೦ ರಿಂದ ೧೧ ಗಂಟೆಯವರೆಗೆ ಡಾ.ಸಾದ್ವಿ ದೇವಪ್ರೀಯಾ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಆಗಮಿಸಲಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಯೋಗದ ಕುರಿತು ಉತ್ತಮ ಅಭಿಪ್ರಾಯ ಬಂದಿದೆ. ಇನ್ನೂ ದೇಶಾದ್ಯಂತ ಯೋಗಕ್ಕೆ ಪ್ರಮುಖ ಆದ್ಯತೆಯನ್ನು ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಯನ್ನು ಯೋಗಮಯ ಮಾಡುವ ಉದ್ದೇಶವನ್ನು ಪತಂಜಲಿ ಯೋಗ ಸಮಿತಿ ಹೊಂದಿದೆ ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿ ಸಂಚಾಲಕರದ ಎಚ್.ಎಚ್.ಇನಾಂದಾರ, ಸೀಮಾ ಮಣ್ಣೂರ, ಆರತಿ ಕಾನಗೋ, ಮಾಲತಿ ಕೆ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net