ಅ.೧೬ ರಂದು ಹೂಗಾರ ಮಾದಯ್ಯನವರ ಜಯಂತಿ

bkt-13-8
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಸುಭಾಸ ಪೂಜಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಎಂ.ಬಿ.ಹೂಗಾರ, ಹನಮಂತ ಹೂಗಾರ, ಜಗನ್ನಾಥ ಹೂಗಾರ, ಯಮನಪ್ಪ ಹೂಗಾರ, ಶಂಕರ ಹೂಗಾರ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಜಿಲ್ಲಾ ಹೂಗಾರ, ಗುರವ, ಪೂಜಾರ, ಜೀರ, ತಾಂಬೋಳಿ ಸಮಾಜದಿಂದ ೧೨ ನೇ ಶತಮಾನದ ಬಸವಾದಿ ಶಿವರಣ ಶ್ರೀ ಹೂಗಾರ ಮಾದಯ್ಯನವರ ಜಯಂತ್ಸೋತ್ಸವವನ್ನು ಅ.೧೬ ರಂದು ಹಮ್ಮಿಕೊಳ್ಳಲಾಗಿದೆ ಎಂದು ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಸುಭಾಸ ಪೂಜಾರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.೧೬ ರಂದು ಬೆಳಗ್ಗೆ ೧೧.೩೦ಕ್ಕೆ ನಗರದ ಶಿವಾನುಭವ ಮಂಟಪ ಚರಂತಿಮಟಠದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಚರಂತಿಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ವಿ.ಪ ಸದಸ್ಯ ಪಿ.ಎಚ್.ಪೂಜಾರ ಉದ್ಘಾಟಿಸಲಿದ್ದಾರೆ ಎಂದರು.
ಇನ್ನು ಅತಿಥಿಗಳಾಗಿ ವಿದ್ಯಾಗಿರಿಯ ಸಾಯಿ ಮಂದಿರ ಟ್ರಸ್ಟ್ ಅಧ್ಯಕ್ಷರಾದ ಜಿ.ಎನ್.ಪಾಟೀಲ, ಸಹಕಾರ ಸಂಘಗಳ ಉಪನಿಬಂಧಕರಾದ ಮಲ್ಲಿಕಾರ್ಜುನ ಪೂಜಾರ ಆಗಮಿಸಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನು ಬೆಳಗ್ಗೆ ೯.೩೦ ಗಂಟೆಗೆ ಬಿವಿವಿ ಸಂಘದಲ್ಲಿರುವ ಬೀಳೂರು ಗುರುಬಸವ ಅಜ್ಜನವರ ದೇವಸ್ಥಾನದಿಂದ ಸಕಲ ವಾದ್ಯ ಮೇಳದೊಂದಿಗೆ ಮಾದಯ್ಯನವರ ಭಾವಚಿತ್ರದ ಮೆರವಣಿಗೆ ಆರಂಭವಾಗಿ ನಗರದ ಟೆಂಗಿನಮಠ, ಬಸವೇಶ್ವರ ಬ್ಯಾಂಕ, ಪೋಲೀಸ್ ಚೌಕಿ, ಬಸವೇಶ್ವರ ವೃತ್ತ ಮೂಲಕ ಶಿವಾನುಭವ ಮಂಟಪ ಚರಂತಿಮಠಕ್ಕೆ ತಲುಪಲಿದೆ. ಜಿಲ್ಲೆಯ ಎಲ್ಲ ಹೂಗಾರ ಸಮಾಜ ಸಂಘದ ಪದಾಧಿಕಾರಿಗಳು, ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಹೂಗಾರ, ಹನಮಂತ ಹೂಗಾರ, ಜಗನ್ನಾಥ ಹೂಗಾರ, ಯಮನಪ್ಪ ಹೂಗಾರ, ಶಂಕರ ಹೂಗಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net