

ಬಾಗಲಕೋಟೆ: ರಾಷ್ಟಿçÃಯ ಸ್ವಯಂಸೇವಕ ಸಂಘದ ನಗರ ಘಟಕದ ವತಿಯಿಂದ ವಿಜಯದಶಮಿ ಉತ್ಸವ ಹಾಗೂ ಪಥ ಸಂಚಲನ ಅ. ೧೨ ರಂದು ನಡೆಯಲಿದೆ.
ಗುಳೇದಗುಡ್ಡ ಪಟ್ಟಣದ ಭಂಡಾರಿ ಕಾಲೇಜಿನ ಆವರಣದಿಂದ ಮಧ್ಯಾಹ್ನ ೩.೪೫ಕ್ಕೆ ಪಥಸಂಚಲನ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಘೋಷವಾದ್ಯ ಸಹಿತ ಗಣವೇಷದಾರಿಗಳ ಸ್ವಯಂ ಸೇವಕರಿಂದ ಪಥ ಸಂಚಲನ ನಡೆಯಲಿದೆ. ರಾಷ್ಟಿçÃಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪಟ್ಟಣದಲ್ಲಿ ಎರಡು ಮಾರ್ಗಗಳಿಂದ ಪಥ ಸಂಚಲನ ನಡೆಯಲಿದ್ದು, ಎರಡೂ ಮಾರ್ಗಗಳು ಪುರಸಭೆ ಎದುರು ಸಮಾಗಮಗೊಳ್ಳಲಿದೆ.
ಬಳಿಕ ಸಂಜೆ ೫.೧೫ ಗಂಟೆಗೆ ಸ್ಥಳೀಯ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದ ಆವರಣದಲ್ಲಿ ವಿಜಯದಶಮಿ ಉತ್ಸವ ನಡೆಯಲಿದ್ದು ಶಿವಯೋಗ ಮಂದಿರ ಸಂಸ್ಥೆಯ ಉಪಾಧ್ಯಕ್ಷರು, ಹಾವೇರಿಯ ಹುಕ್ಕೇರಿ ಮಠದ ಪೀಠಾಧ್ಯಕ್ಷ ಸದಾಶಿವ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದರೆ. ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ ಮುಖ್ಯ ವಕ್ತಾರರಾಗಿ ಆಗಮಿಸಲಿದ್ದಾರೆ.
ಪಟ್ಟಣ ಕೇಸರಿಮಯ: ಶತಮಾನೋತ್ಸವದ ಸಂಭ್ರಮದಲ್ಲಿರುವ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಈ ಸಾರಿ ಪಥ ಸಂಚಲನ ಗಮನ ಸೆಳೆದಿದಿದೆ. ಪಟ್ಟಣದ ಪ್ರಮುಖ ಬೀದಿಗಳು ಕೇಸರಿಮಯಗೊಂಡಿವೆ. ಪಟ್ಟಣವನ್ನು ಮಧುವನಗಿತ್ತಿಯಂತೆ ಶೃಂಗರಿಸಲಾಗಿದೆ.
ಪಟ್ಟಣದ ಮಾರ್ಕೆಟ್‌ನ ಸರ್ಕಲ್‌ನಲ್ಲಿ ಮಹಾದ್ವಾರ ನಿರ್ಮಿಸಿ ಸುಭಾಷಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಛತ್ರಪತಿ ಶಿವಾಜಿ, ಇಮ್ಮಡಿ ಪುಲಕೇಶಿ ಕಟೌಟ್ ಗಮನ ಸೆಳೆಯುತ್ತಿವೆ. ಪುರಸಭೆ ಎದುರು ಧರ್ಮಸ್ಥಳ ಮಹಾದ್ವಾರ, ಬನ್ನಿಕಟ್ಟಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮಹಾದ್ವಾರ ನಿರ್ಮಿಸಿ, ಕÁ್ರಂತಿಕಾರಿ ಭಗತ್‌ಸಿಂಗ್, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ ಆಜಾದ್, ವೀರ ಸಾರ್ವಕರ, ಬುದ್ಧ, ಬಸವಣ್ಣ, ಅಂಬೇಡ್ಕರ, ಪಂ.ಪುಟ್ಟರಾಜ ಗವಾಯಿಗಳು, ಸಂಘದ ಸಂಸ್ಥಾಪಕ ಡಾ. ಹೆಗಡೆವಾರ ಹಾಗೂ ಗುರೂಜಿ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ೨೫೦೦ ಕ್ಕೂ ಹೆಚ್ಚು ಗಣವೇಷಧಾರಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲೆಂಡೆ ಸಂಭ್ರಮ, ಸಡಗರ ಮನೆ ಮಾಡಿದೆ.