

ಬಾಗಲಕೋಟೆ : ರಾಷ್ಟಿçÃಯ ಸ್ವಯಂಸೇವಕ ಸಂಘವು ಬೀಳಗಿ ತಾಲೂಕು ಪಥಸಂಚಲನ ಅ.೧೨ ಸಂಜೆ ೫.೩೦ ಗಂಟೆಗೆ ಜಿಲ್ಲೆಯ ಬೀಳಗಿ ಪಟ್ಟಣದ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಾತೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ.
ಬೀಳಗಿ ಪಟ್ಟಣದ ಕೃಷ್ಣದೇವರಾಯ ಪತ್ತಿನ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಸಿದ್ದನಗೌಡ ಪಾಟೀಲ, ಮುಖ್ಯ ಅತಿಥಿಗಳಾಗಿ ಮತ್ತು ರಾಷ್ಟಿçÃಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ಅರುಕುಮಾರ ಬೌದ್ಧಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಹತ್ತಿರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ೨.೩೦ ಗಂಟೆಗೆಯ ಒಳಗಾಗಿ ಪಥ ಸಂಚಲನಕ್ಕೆ ಗಣವೇಷದಲ್ಲಿ ಆಗಮಿಸಬೇಕು. ಶಿಸ್ತ ಬದ್ಧವಾದ ತಯಾರಿಯಲ್ಲಿ ಇರಬೇಕು.
ಪಥಸಂಚಲನ ಮಾರ್ಗಸೂಚಿ: ಮಾರ್ಗ-೧ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ನಂದಿ ನಗರ, ಡಾ.ಬಿ.ಆರ್.ಅಂಬೇಡ್ಕರ ವೃತ್ತ. ಕಿಲ್ಲಾ ಓಣಿ(ಯುಟರ್ನ) ಗ್ರಾಮ ಚಾವಡಿ, ನೇಕಾರ ಓಣಿ, ಹುಚ್ಚೇಶ್ವರ ನಗರ, ಬಸವ ವೃತ್ತ, ಶಿವಾಜಿ ಸರ್ಕಲ್, ಮಾರ್ಗ-೨ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ಗಾಂಽ ನಗರ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಕಂಬಾರ ಓಣಿ, ಸುರಳಿಬಾವಿ ಓಣಿ, ಹೋಳಿಕಟ್ಟಿ, ಮುದೇಶ್ವರ ಗುಡಿ (ಯುಟರ್ನ) ಬಸವ, ಶಿವಾಜಿ ವೃತ್ತದ ಮೂಲಕ ಸಿದ್ದೇಶ್ವರ ಪ.ಪೂ.ಕಾಲೇಜಿಗೆ ಸೇರಿದ ನಂತರ ಸಭೆ ನಡೆಯಲಿದೆ.