ಅ.1ರಂದು 5ನೇ ವರ್ಷದ ಆಯುಧ ಪೂಜೆ

Published on

ಸುಂಟಿಕೊಪ್ಪ: ಮಾದಾಪುರದ ಸಾರ್ವಜನಿಕ ಆಯುಧ ಪೂಜಾ ಸಮಿತಿ ವತಿಯಿಂದ 5ನೇ ವರ್ಷದ ಆಯುಧ ಪೂಜಾ ಸಮಾರಂಭವನ್ನು ಅ.1ರಂದು ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದೆ ಎಂದು ಆಚರಣಾ ಸಮಿತಿ ತಿಳಿಸಿದೆ.

ಮಕ್ಕಳಿಗೆ ಗ್ರೂಪ್ ಡಾನ್ಸ್ ಹಾಗೂ ಮಂಗಳೂರಿನ ವಿಶ್ವಾಸ್ ಮ್ಯೂಸಿಕ್ ಮತ್ತು ಸಿಜ್ಲಿಂಗ್ ಡಾನ್ಸ್ ತಂಡದವರಿಂದ ಸಂಗೀತ ರಸ ಸಂಜೆ, ವಿವಿಧ ತಂಡಗಳಿಂದ ನೃತ್ಯ, ಮಿಮಿಕ್ರಿ ಕಾರ್ಯಕ್ರಮ ಹಾಗೂ ವಾಹನಗಳ ಅಲಂಕಾರ, ಆಟೋರಿಕ್ಷಾ ಅಲಂಕಾರ, ಕಚೇರಿ ಸಂಘ ಸಂಸ್ಥೆಗಳ ಅಲಂಕಾರ, ಅಂಗಡಿ ಮಳಿಗೆ ಅಲಂಕಾರ, ಮಕ್ಕಳ ಮಂಟಪ ಅಲಂಕಾರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಆಯುಧ ಪೂಜಾ ಸಮಾರಂಭದ ಉದ್ಘಾಟನೆಯನ್ನು ಶಾಸಕ ಡಾ.ಮಂತರ್‌ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾರ್ವಜನಿಕ ಆಯುಧ ಪೂಜಾ ಆಚರಣಾ ಸಮಿತಿ ಅಧ್ಯಕ್ಷ ವಿ.ಕುಮಾರ್ ವಹಿಸಲಿದ್ದಾರೆ. ಬೆಂಗಳೂರಿನ ಬಾಬಸ್‌ಪಾಳ್ಯ ಜಿ.ಎಲ್.ಆರ್.ವೆಂಚರ್ಸ್‌, ಎಲ್‌ಎಲ್‌ಪಿ ಲಲ್ಲೇಶ್ ರೆಡ್ಡಿ ಆಂಬುಲೆನ್ಸ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಒಕ್ಕಲಿಗ ಸಂಘ ಕಾರ್ಯಧ್ಯಕ್ಷ ಹರಪ್ಪಳ್ಳಿ ರವೀಂದ್ರ, ಮಾದಾಪುರ ಗ್ರಾಪಂ ಅಧ್ಯಕ್ಷ ಎಂ.ಜಿ.ಸೋಮಣ್ಣ, ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಉತ್ತಪ್ಪ, ಜಿಪಂ ಮಾಜಿ ಸದಸ್ಯರಾದ ಟಿ.ಪಿ.ಸಂದೇಶ್, ಬಿ.ಬಿ.ಭಾರತೀಶ್, ಕೊಡಗು ಜಿಲ್ಲಾಡಳಿತ ಕಾನೂನು ಸಲಹೆಗಾರರಾದ ಎ.ಲೋಕೇಶ್‌ಕುಮಾರ್, ಕೆದಕಲ್ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಎಂ.ಸಂಜು ಪೊನ್ನಪ್ಪ, ಮಾದಾಪುರ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗೂಳಪ್ಪ ಹನುಮಂತ ಕೂತಿನ,ನಿರ್ಮಾಪಕರು ಮತ್ತು ಚಲನಚಿತ್ರ ನಟ ಎಂ.ಆದ್ಯ ತಿಮ್ಮಯ್ಯ, ಕೊಡಗು ಜಿಲ್ಲೆಯ ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯನ್, ಸಮಾಜ ಸೇವಕ ನಾಪ್ಪಂಡ ಮುತ್ತಪ್ಪ, ಕಿರಂಗದೂರು ಪ್ರವಾಸಿ ಮತ್ತು ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net