

ಬೆಂಗಳೂರು: ನಗರದ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಲೇಖಕಿ ಮಾಲ್ಸಾಮಿ ಜೇಕಬ್ ಅವರ ಇಂಗ್ಲಿಷ್ ಕೃತಿಯ ಕನ್ನಡ ಅನುವಾದ "ಜೊರಾಮಿ'ಯನ್ನು ಹಿರಿಯ ಚಿಂತಕ ಜಿ. ರಾಮಕೃಷ್ಣ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ರಾಮಕೃಷ್ಣ, ಸ್ವತಂತ್ರ ಅಸ್ತಿತ್ವಕ್ಕಾಗಿ ಮಿಜೋರಾಂನಲ್ಲಿ ಅನೇಕ ವರ್ಷಗಳ ಉಗ್ರ ಹೋರಾಟ ನಡೆಯಿತು. ಈ ಹೋರಾಟವನ್ನು ನಮ್ಮ ಸೈನ್ಯ ಹತ್ತಿಕ್ಕಿತ್ತು. ಆ ಹೋರಾಟದ ಮನಕಲಕುವ ಚಿತ್ರಣವನ್ನು ಪುಸ್ತಕದಲ್ಲಿ ಪರಿಣಾಮಕಾರಿಯಾಗಿ ವಿವರಿಸಲಾಗಿದೆ. ಈ ಕೃತಿಯನ್ನು ಓದುವಾಗ ಕಾಶ್ಮೀರದ ಪ್ರಸ್ತುತ ಸನ್ನಿವೇಶವನ್ನೂ ಮನಸ್ಸಿಗೆ ಗಟ್ಟಿಯಾಗಿ ಮುಟ್ಟಿಸು-ತ್ತ-ದೆ. ಅರ್ಥಪೂರ್ಣ ಸಾಮಾಜಿಕ ಜೀವನದ ಆಕಾಂಕ್ಷೆಗಳನ್ನು ಈ ಕೃತಿ ಪ್ರತಿಬಿಂಬಿಸುತ್ತದೆ ಎಂದರು.
ನಿವೃತ್ತ ಇಂಗ್ಲಿಷ್ ಉ-ಪ-ನ್ಯಾ-ಸಕಿ ಶೈಲಜಾ ಮಾತನಾಡಿ, "ಜೊರಾಮಿ' ಕಾದಂಬರಿಯು ಇತಿಹಾಸ ಮತ್ತು ಸೃಜನಾತ್ಮಕ ಸಾಹಿತ್ಯ ಎರಡನ್ನೂ ಒಳಗೊಂಡಿದೆ. ಇತಿಹಾಸವನ್ನು ಸೃಜನಾತ್ಮಕವಾಗಿ ಚಿತ್ರಿಸುವಾಗ ಅನುವಾದಕಿ ಕಲ್ಪನೆಯನ್ನು ತುರುಕದೆ, ಇತಿಹಾಸ ಹೇಳುವಲ್ಲಿ ದಾರಿ ತಪ್ಪದಂತೆ ಎಚ್ಚರ ವಹಿಸಿದ್ದಾರೆ. ಎಲ್ಲ ಯಾತನೆಗಳಿಂದ ಬಿಡುಗಡೆ ಸಾಧ್ಯವಿದೆ ಎಂಬುದನ್ನು ಇಡೀ ಕಾದಂಬರಿ ದರ್ಶನ ಮಾಡುತ್ತದೆ ಎಂದು ಹೇಳಿದರು.
ಕೃತಿಯ ಕನ್ನಡ ಅನುವಾದರಿ ಆರ್. ಭೂಮಿಕಾ, ಹಿರಿಯ ಪತ್ರಕರ್ತ ಡಿ. ಉಮಾಪತಿ, ಸಾಮಾಜಿಕ ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ್, ಲೇಖಕಿ ಮಾಲ್ಸಾಮಿ ಜೇಕಬ್ ಮತ್ತಿತರರಿದ್ದರು.