

ಪುತ್ತೂರು ಗ್ರಾಮಾಂತರ: ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಯಶಸ್ವಿಯಾಗುತ್ತಿರುವುದನ್ನು ಕಂಡು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಜನತೆಗೆ ಮೋಸ ಮಾಡುವುದು, ಸುಳ್ಳು ಹೇಳಿ ಜನರನ್ನು ಮೂರ್ಖರನ್ನಾಗಿಸುವುದೇ ಬಿಜೆಪಿ ಅಜೆಂಡಾ. ಇದರ ಅರಿವು ಜನರಿದೆ. ಹೀಗಾಗಿ ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಸರ್ವೆಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಷ್ಣಪ್ರಸಾದ್ ಆಳ್ವ ಮಾತನಾಡಿ, ಶಾಸಕರ ಅಭಿವೃದ್ಧಿ ಕೆಲಸಕ್ಕೆ ಗೌರವ ನೀಡಿ ಅನ್ಯ ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷದ ಬಗ್ಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಪ್ರತೀ ಕಾರ್ಯಕರ್ತರು ಪಕ್ಷದ ಆಸ್ತಿಯಾಗಿದ್ದು, ಪಕ್ಷ ಸಂಟನೆಗೆ ಒತ್ತು ನೀಡಬೇಕು ಎಂದರು.
ಸರ್ವೆ ವಲಯ ಕಾಂಗ್ರೆಸ್ ಉಸ್ತುವಾರಿ ರವೀಂದ್ರ ರೈ ನೆಕ್ಕಿಲು, ಬ್ಲಾಕ್ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀ ಪ್ರಸಾದ್ ಪಾಣಾಜೆ, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಂಡೂರು, ಬ್ಲಾಕ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಸುಪ್ರಿತ್ ಕನ್ನಾರಾಯ, ಗ್ರಾಪಂ ಸದಸ್ಯರಾದ ರಸಿಕ ಶಿವನಾಥ ರೈ, ಮಹಮ್ಮದಾಲಿ ನೇರೋಲ್ತಡ್ಕ, ಪಕ್ಷದ ಮುಖಂಡರಾದ ಸಿದ್ದಿಕ್ ಸುಲ್ತಾನ್, ಪ್ರವೀಣ್ ಆಚಾರ್ಯ ನರಿಮೊಗರು, ಗೀತಾ ಮರಿಯ, ಅಶೋಕ ಎಸ್.ಡಿ., ಹನೀಫ್ ಕಲ್ಪನೆ, ಹಮೀದ್ ನೇರೋಳ್ತಡ್ಕ, ರಾಮಚಂದ್ರ ಸೊರಕೆ, ಸುಮತಿ, ಹನೀಫ್ ಕೆ.ಎಂ.ರೆಂಜಲಾಡಿ, ಗಣೇಶ್ ನೇರೋಲ್ತಡ್ಕ, ಹಂಝ ಕೂಡುರಸ್ತೆ ಮತ್ತಿತರರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಕಮಲೇಶ್ ಸರ್ವೆದೊಳಗುತ್ತು ಸ್ವಾಗತಿಸಿದರು.
ಪ್ರತೀ ಗ್ರಾಮದಲ್ಲಿ ನಿವೇಶನಕ್ಕಾಗಿ ಜಾಗ ಗುರುತಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ನಿವೇಶನ ಇಲ್ಲದ ಬಡವರಿಗೆ ನಿವೇಶನ ನೀಡಿಯೇ ಸಿದ್ಧ. ಕಾರ್ಯಕರ್ತರು ನಿವೇಶನ ಇಲ್ಲದ ಕುಟುಂಬಗಳನ್ನು ಗುರುತಿಸಿ ಅವರಿಗೆ ನೆರವು ನೀಡುವ ಕೆಲಸ ಮಾಡಬೇಕು. ಈಗ ಕ್ಷೇತ್ರದಲ್ಲಿ ಒಟ್ಟು 300 ಎಕರೆ ಜಾಗ ನಿವೇಶನಕ್ಕೆ ಮಂಜೂರಾಗಿದೆ . ಅಶೋಕ್ ಕುಮಾರ್ ರೈ ಶಾಸಕ