

ಬೆಳ್ತಂಗಡಿ: ಆದಿಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಸ್ಥಾನದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ತಪೋವನ ನಿರ್ಮಾಣ ಕಾರ್ಯದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕ ಭಾಗವಹಿಸಿ ವಿವಿಧ ರೀತಿಯ ಹಣ್ಣುಗಳ ಸಸಿಗಳನ್ನು ನಾಟಿ ಮಾಡಿತು.
ಯುವವಾಹಿನಿ ಬೆಳ್ತಂಗಡಿ ಘಟಕ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಘಟಕ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ, ಹರೀಶ್ ಸುವರ್ಣ ಕನ್ಯಾಡಿ, ಎಂ.ಕೆ.ಪ್ರಸಾದ್, ಸದಾಶಿವ ಪೂಜಾರಿ ಊರ, ಕಾರ್ಯಕ್ರಮ ಸಂಚಾಲಕ ಸುನೀಲ್ ಕನ್ಯಾಡಿ, ಘಟಕದ ಉಪಾಧ್ಯಕ್ಷ ಸಂತೋಷ್ ಅರಳಿ, ಕಾರ್ಯದರ್ಶಿ ಮಧುರ ರಾವ್, ಕೋಶಾಧಿಕಾರಿ ನಾಗೇಶ್ ಅದೇಲು, ನಿರ್ದೇಶಕರಾದ ಅಶೋಕ್ ಕಲ್ಮಂಜ, ಸುದರ್ಶನ್ ಬಂಗೇರ, ಯೋಗೀಶ್ ಕಳಿಯ, ಸಲಹೆಗಾರರಾದ ಮನೋಹರ್ ಬಳಂಜ, ಜಾರಪ್ಪ ಪೂಜಾರಿ, ರೂಪೇಶ್ ಧರ್ಮಸ್ಥಳ, ಸಂತೋಷ್ ಕೆ.ಸಿ. ಮೊದಲಾದವರಿದ್ದರು.