

ಬಂಟ್ವಾಳ: ಗುರುತತ್ವ ವಾಹಿನಿ ಎಂಬ ಪರಿಕಲ್ಪನೆ ಮೂಲಕ ಮನೆ ಮನೆ ಭಜನೆ ಹಾಗೂ ಗುರು ಸಂದೇಶದ ಗುರುತತ್ವ ವಾಹಿನಿ ಕಾರ್ಯಕ್ರಮ ಬಂಟ್ವಾಳ ಘಟಕದ ನೂತನ ತಂಡದ ಯಶಸ್ಸಿನ ಮೆಟ್ಟಿಲಾಗಲಿ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ ತಿಳಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರ ಮನೆ ಭಜನೆಯ ಪರಿಕಲ್ಪನೆಯ ‘ಗುರುತತ್ವ ವಾಹಿನಿ’ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುಪೀಠದ ಸಮ್ಮುಖದಲ್ಲಿ ಯುವವಾಹಿನಿ ಸದಸ್ಯರಿಂದ ಸುಮಾರು ಎರಡು ಗಂಟೆ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು. ಕ್ಷೇತ್ರಾಡಳಿತ ವತಿಯಿಂದ ಅನುಗ್ರಹ ಪತ್ರ ನೀಡಿ ಗೌರವಿಸಿದರು.
ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್, ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ ಸಂಘಟನಾ ಕಾರ್ಯದರ್ಶಿ ಉದಯ್ ಮೆನಾಡ್, ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ ಕ್ರೀಡಾ ನಿರ್ದೇಶಕ ಮಧುಸೂದನ್ ಮಧ್ವ, ಸದಸ್ಯರಾದ ಪ್ರಶಾಂತ್ ಶಾಂತಿ, ಹರೀಶ್ ಅಜೆಕಲ, ನಾಗೇಶ್ ಪೂಜಾರಿ ಏಲಬೆ, ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಹರೀಶ್ ಪಚ್ಚನಾಡಿ, ಪ್ರಚಾರ ನಿರ್ದೇಶಕ ಪ್ರಥ್ವೀರಾಜ್ ಮಂಗಳೂರು ಘಟಕ ಅಧ್ಯಕ್ಷ ನಾಗೇಶ್ ಪೂಜಾರಿ, ಮಂಗಳೂರು ಘಟಕ ಸದಸ್ಯರಾದ ಕೌಶಿಕ್ ಮಂಜನಾಡಿ, ದಿಶಾಂತ್ ಮತ್ತಿತರರು ಉಪಸ್ಥಿತರಿದ್ದರು.