

ಬಂಟ್ವಾಳ: ಇಲ್ಲಿನ ಯಶೋಧರ ಪೂಜಾರಿ ಕಡಂಬಲ್ಕೆ ಮನೆಯಲ್ಲಿ ಯುವವಾಹಿನಿ ಬಂಟ್ಟಾಳ ಘಟಕ ವತಿಯಿಂದ ಗುರುತತ್ವವಾಹಿನಿ ಮಾಲಿಕೆ 17 ಇತ್ತೀಚೆಗೆ ನಡೆಯಿತು.
ಯುವವಾಹಿನಿ ಬಂಟ್ಟಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಗುರುಸಂದೇಶ ನೀಡಿದರು. ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ ಮಧುಸೂದನ್ ಮಧ್ವ, ಮಹೇಶ್ ಬೊಳ್ಳಾಯಿ, ನಿಕಟಪೂರ್ವ ಅಧ್ಯಕ್ಷ ಹರೀಶ್ ಕುದನೆ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ಅರುಣ್ ಬಿ.ಸಿ.ರೋಡ್, ಸದಸ್ಯರಾದ ಯತೀಶ್ ಬೊಳ್ಳಾಯಿ, ಪ್ರಶಾಂತ್ ಏರಮಲೆ, ನಾಗೇಶ್ ಏಲಬೆ, ಜಗದೀಶ್ ಕಲ್ಲಡ್ಕ, ಸುನಿತಾ ನಿತಿನ್ ಮಾರ್ನಬೈಲ್, ಹರೀಶ್ ಅಜೆಕಲಾ, ಶೈಲಜಾ ಹರೀಶ್ ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು.