ಯುವ ಜನತೆಯಲ್ಲಿರಲಿ ಧನಾತ್ಮಕ ಚಿಂತನೆ : ಪದ್ಮರಾಜ್ ಆರ್.ಪೂಜಾರಿ ಸಲಹೆ

New Project (4)
Published on

ಮೂಲ್ಕಿ: ಯುವ ಜನಾಂಗ ಋಣಾತ್ಮಕ ಚಿಂತನೆ ತ್ಯಜಿಸಿ ಧನಾತ್ಮಕವಾಗಿ ಚಿಂತಿಸಬೇಕಾದ ಅಗತ್ಯವಿದೆ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಹೇಳಿದರು.

ಮಟ್ಟು ಶ್ರೀ ಕೋರ್ದಬ್ಬು ದೈವಸ್ಥಾನದ ಬಳಿ ಮಟ್ಟು ಶಾಂಭವಿ ಯುವ ಸಂಗಮ ವತಿಯಿಂದ ವಿದ್ಯಾನಿಧಿಯ ಸಹಾಯಾರ್ಥ ಯುವ ಉತ್ಸವ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೈಕಂಪಾಡಿ ಬಿಪಿಸಿ ಎಲ್‌ಒಪಿಎಸ್ ಮುಖ್ಯ ಪ್ರಬಂಧಕ ವೈ.ಎಸ್.ರಾಜ್ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ಲಿಪಿಯನ್ನು ತುಳುವಿಗೆ ಅನುವಾದ ಮಾಡಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಸುವಿತ್ ಕುಮಾರ್ ಮಟ್ಟು ಅವರನ್ನು ಸನ್ಮಾನಿಸಲಾಯಿತು. ಆದರ್ಶ ಯುವಕ ಕೋಟಿ-ಚೆನ್ನಯ ಪ್ರಶಸ್ತಿಯನ್ನು ಸುಖೇಶ್ ಕೋಟ್ಯಾನ್ ಮತ್ತು ವಿಶ್ವನಾಥ ಅವರಿಗೆ, ಆದರ್ಶ ವಿದ್ಯಾರ್ಥಿ ಏಕಲವ್ಯ ಪ್ರಶಸ್ತಿ-ಜೇಸ್ಟನ್ ಡಿಸೋಜ, ಆದರ್ಶ ಮಹಿಳೆ ರಾಣಿ ಅಬ್ಬಕ್ಕ ಪ್ರಶಸ್ತಿ-ರೇಖಾ ಮೇಘನಾದ ಮಟ್ಟು, ಆದರ್ಶ ಕೃಷಿಕ ಬೆನ್ನಿದ ಮಗೆ ಪ್ರಶಸ್ತಿ-ಸತೀಶ್ ಕುಮಾರ್ ಹೊಸ ಕೊಪ್ಪಲ, ಆದರ್ಶ ದಂಪತಿ-ಶಾಂತಾ ಜಯ ಸುವರ್ಣ ಅವರಿಗೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿವೇತನ ಮತ್ತು ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಯೋಗೀಶ್ ಕೋಟ್ಯಾನ್, ಖಾಸಗಿ ವಾಹಿನಿ ನಿರ್ದೇಶಕ ಸುರೇಶ್ ಕರ್ಕೇರ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಶೇಖರ್ ಕುಕ್ಯಾನ್ ಮುಂಬೈ, ವಿಶ್ವೇಂದ್ರ ಅಮೀನ್ ಮುಂಬೈ, ಶಾಂಭವಿ ಯುವ ಸಂಗಮದ ಅಧ್ಯಕ್ಷ ಸಂತೋಷ್ ಸುವರ್ಣ, ಮಾಜಿ ಅಧ್ಯಕ್ಷ ಧನಂಜಯ ಮಟ್ಟು, ಮಹಿಳಾ ಮಂಡಲದ ಅಧ್ಯಕ್ಷೆ ಸವಿತಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕೊಲ್ನಾಡ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net