ಬರ್ತ್​ಡೇ ದಿನವೇ ಚೂರಿ ಇರಿತಕ್ಕೊಳಗಾದ ಪ್ರೇಮಿ; ಪ್ರೇಯಸಿಯನ್ನು ನೋಡಲು ಬಂದಿದ್ದಕ್ಕೆ ಇರಿದೇ ಬಿಟ್ಟ ಆಕೆಯ ಬಾವ

Love Stab
ಸುನಿಲ್, ರಾಕೇಶ್
Published on

ಬೆಂಗಳೂರು: ಬರ್ತ್​ಡೇ ದಿನ ಖುಷಿಯಿಂದ ಪ್ರೇಯಸಿಯನ್ನು ನೋಡಲು ಹೋಗಿದ್ದ ಪ್ರೇಮಿ ಚೂರಿ ಇರಿತಕ್ಕೊಳಗಾಗಿದ್ದಾನೆ. ಬೆಂಗಳೂರಿನ ಹಳೇ ಬಯ್ಯಪ್ಪನಹಳ್ಳಿಯಲ್ಲಿ ಈ ಪ್ರಕರಣ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ರಾಕೇಶ್ ಅಲಿಯಾಸ್ ರಿಷಿ ಎಂಬಾತ ತನ್ನ ಜನ್ಮದಿನವಾದ ಜ. 15ರಂದು ಪ್ರೇಯಸಿಯನ್ನು ನೋಡಲು ಹೋಗಿದ್ದ. ಬರ್ತ್​ಡೇ ದಿನ ಪ್ರೇಯಸಿಯಿಂದ ವಿಷ್ ಮಾಡಿಸಿಕೊಳ್ಳಬೇಕು ಎಂದು ಹೋಗಿದ್ದವನಿಗೆ ಆಕೆಯ ಬಾವನೇ ವಿಲನ್ ರೀತಿ ಎದುರಾಗಿದ್ದಾನೆ.

ನಾದಿನಿಯನ್ನು ನೋಡಲು ಬಂದ ಆಕೆಯ ಪ್ರಿಯಕರನನ್ನು ಸಿಟ್ಟಾದ ಬಾವ ಸುನಿಲ್, ರಾಕೇಶ್​ಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡು ಅಲ್ಲಿಂದ ಪಾರಾದ ರಾಕೇಶ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾನೆ.

ಪ್ರಕರಣ ನಡೆದ ಬಳಿಕ ಸುನಿಲ್ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಬಯ್ಯಪ್ಪನಹಳ್ಳಿ ಪೊಲೀಸರು ಸುನಿಲ್​ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಸುನಿಲ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net