ತಂಡದಿಂದ ಚಾಕುವಿನಿಂದ ಇರಿತ, ಯುವಕ ಗಂಭೀರ

man thrashed
Published on

ಕಾಸರಗೋಡು: ಕುಂಬಳೆ ಪೊಲೀಸ್​ ಠಾಣೆ ವ್ಯಾಪ್ತಿಯ ಸೀತಾಂಗೋಳಿ ಪೇಟೆಯಲ್ಲಿ ತಂಡವೊಂದು ಯುವಕನನ್ನು ಇರಿದು ಗಾಯಗೊಳಿಸಿದೆ. ಬದಿಯಡ್ಕ ನಿವಾಸಿ ಅನಿಲ್​ಕುಮಾರ್​ ಯಾನೆ ಕುಟ್ಟನ್​ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಎರಡು ವಾಹನಗಳನ್ನೂ ವಶಪಡಿಸಿಕೊಂಡಿದ್ದಾರೆ. ಇರಿದ ಚಾಕು ಅನಿಲ್​ ಕುಮಾರ್​ ಕತ್ತಿನಲ್ಲಿ ಸಿಲುಕಿಕೊಂಡಿದ್ದು, ಆಸ್ಪತ್ರೆಗೆ ತೆರಳಿ ಶಸಚಿಕಿತ್ಸೆ ಮೂಲಕ ಚಾಕು ತೆರವುಗೊಳಿಸಲಾಗಿದೆ. ಕತ್ತಿನ ಭಾಗಕ್ಕೆ ಗಂಭೀರ ಗಾಯಗಳುಂಟಾಗಿದ್ದು, ಭಾರಿ ಪ್ರಮಾಣದಲ್ಲಿ ರಕ್ತಸ್ರಾವವುಂಟಾಗಿದೆ. ಭಾನುವಾರ ತಡರಾತ್ರಿ ಟನೆ ನಡೆದಿದೆ. ಬದಿಯಡ್ಕದಲ್ಲಿ ಮೀನಿನ ವ್ಯಾಪಾರಿಯಾಗಿರುವ ಅನಿಲ್​ಕುಮಾರ್​ ಅವರನ್ನು ಮೊಬೈಲ್​ ಕರೆ ಮಾಡಿ ಸೀತಾಂಗೋಳಿಗೆ ಕರೆಸಿಕೊಂಡಿರುವ ತಂಡ, ಅನಿಲ್​ಕುಮಾರ್​ ಹಾಗೂ ಅವರ ಜತೆ ಆಗಮಿಸಿದ್ದವರ ಜತೆ ವಾಗ್ವಾದಕ್ಕೆ ಮುಂದಾಗಿದೆ. ಬಳಿಕ ಏಕಾಏಕಿ ಅನಿಲ್​ಕುಮಾರ್​ನನ್ನು ಅಟ್ಟಾಡಿಸಿ ಚಾಕುವಿನಿಂದ ಇರಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net