ಯುವ ಸ್ಪಂದನ ಅರಿವು ಕಾರ್ಯಕ್ರಮ

7ark1
ಅರಕಲಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುಕ್ರವಾರ ನಡೆದ ಯುವ ಸ್ಪಂದನ ಅರಿವು ಕಾರ್ಯಕ್ರಮಲ್ಲಿ ಸ್ವ ಅರಿವು ಆತ್ಮಗೌರವ ಕುರಿತು ಮಾಹಿತಿ ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಚಂದ್ರಶೇಖರ್, ಮಹಾದೇವಪ್ಪ ಇದ್ದರು.
Published on

ಅರಕಲಗೂಡು: ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುಕ್ರವಾರ ಯುವ ಸ್ಪಂದನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕರ್ತ ಜಿ.ಎಲ್.ಚಂದ್ರಶೇಖರ್ ಮಾತನಾಡಿ, ಆರೋಗ್ಯ ಸುರಕ್ಷತೆ, ಜೀವನಶೈಲಿ ಹಾಗೂ ಹದಿಹರೆಯದ ಬೆಳವಣಿಗೆ ಕುರಿತು ಮಾಹಿತಿ ನೀಡಿದರು.

ಉಪಪ್ರಾಂಶುಪಾಲ ಮಹಾದೇವಪ್ಪ ಮಾತನಾಡಿ, ವಯೋಮಾನದವರು ಯುವಜನ ಸಂಬಂಧಿ ತೊಂದರೆಗಳಿಗಾಗಿ ಯುವ ಸ್ಪಂದನ ಕೇಂದ್ರವನ್ನು ಸಂಪರ್ಕಿಸಬಹುದು. ಯುವ ಸ್ಪಂದನ ಕೇಂದ್ರವು ಪ್ರತಿ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಇರುತ್ತದೆ. ಯುವ ಸ್ಪಂದನದಲ್ಲಿ ವೈಯಕ್ತಿಕ ಬೆಂಬಲ, ದೂರವಾಣಿ ಮುಖಾಂತರ ಬೆಂಬಲ, ಬಿಕ್ಕಟ್ಟು ನಿರ್ವಹಣೆ, ಪಠ್ಯ ಮತ್ತು ವೃತ್ತಿಪರ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆ ಮತ್ತು ಉಲ್ಲೇಖ ಸೇವೆಗಳು ಸ್ವಯಂ ಅಭಿವೃದ್ಧಿ, ಭಾವನಾತ್ಮಕ ಬೆಂಬಲ, ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಮಾರ್ಗದರ್ಶನ ಹಾಗೂ ಇತರ ಸೌಲಭ್ಯಗಳು ದೊರೆಯುತ್ತವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net