ಚಿಂತಾಮಣಿ: ನಗರದ ಎಂ.ಜಿ.ರಸ್ತೆಯ ಸಾರ್ವಜನಿಕ ಆಸ್ಪತ್ರೆ ಪ್ರವೇಶದ್ವಾರದ ಮುಂಭಾಗದಲ್ಲಿರುವ ಹಣ್ಣು ಮಾರಾಟದ ಅಂಗಡಿಗಳ ಮೂರು ಯುವಕರ ನಡುವೆ ಮಂಗಳವಾರ ಸಂಜೆ ಉಂಟಾದ ಜಗಳದಲ್ಲಿ ಒಬ್ಬನ ಕೊಲೆಯಾಗಿದೆ. ನಗರದ ನಾರಸಿಂಹಪೇಟೆಯ ನಿವಾಸಿ ಅರ್ಬಾಜ್ (23) ಮೃತ. ನಗರದ ಕೆಜಿಎನ್ ಬಡಾವಣೆಯ ನಿವಾಸಿ (23), ಶಬಾದ್ ಮತ್ತು ಟ್ಯಾಂಕ್ ಬಂಡ್ ರಸ್ತೆಯ ಫಹಾದ್ (22) ಆರೋಪಿಗಳಾಗಿದ್ದು, ಫಹಾದ್ನನ್ನು ಬಂಧಿಸಲಾಗಿದೆ. ಅರ್ಬಾಜ್ ಬಳಿ ತೆರಳಿದ್ದ ಶಬಾದ್ ಮತ್ತು ಫಹಾದ್ ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕತ್ತರಿಯಲ್ಲಿ ಅರ್ಬಾಜ್ ಕುತ್ತಿಗೆಗೆ ಇರಿದಿದ್ದು, ತೀವ್ರ ಗಾಯಗೊಂಡ ಅರ್ಬಾಜ್ನನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಲಿಸಿಲ್ಲ. ಚಿಕ್ಕಬಳ್ಳಾಪುರ ಅಪರಾಧ ವಿಭಾಗದ ಡಿವೈಎಸ್ಪಿ ರವಿಕುಮಾರ್ ಕೆ.ಯಲ್ಲಪ್ಪ ಸ್ಥಳ ಪರಿಶೀಲಿಸಿದರು. ನಗರಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಿಜಿಕುಮಾರ್, ಪಿಎಸ್ಐ ರಮೇಶ್, ಪಿಎಸ್ಐ ಪ್ರಕಾಶ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.