ಬಸ್​ನಿಲ್ದಾಣದಲ್ಲೇ ನಡೆಯಿತು ಭೀಕರ ಕೊಲೆ; ಕೊಂದು ತಲೆ ಮೇಲೆ ಕಲ್ಲು ಎತ್ತಿ ಹಾಕಿದ ಕ್ರೂರಿಗಳು!

death
ಸಾಂದರ್ಭಿಕ ಚಿತ್ರ
Published on

ವಿಜಯಪುರ: ಯುವಕನೊಬ್ಬನನ್ನು ದುಷ್ಕರ್ಮಿಗಳು ಬಸ್​ನಿಲ್ದಾಣದಲ್ಲೇ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣವೊಂದು ನಡೆದಿದೆ. ವಿಜಯಪುರ ಜಿಲ್ಲೆಯ ಬಸನವಬಾಗೇವಾಡಿಯ ಬಸವನಹಟ್ಟಿ ಬಸ್​ನಿಲ್ದಾಣದಲ್ಲಿ ಈ ಕೊಲೆ ನಡೆದಿದೆ.

ಬಸವನಬಾಗೇಬಾಡಿ ಪಟ್ಟಣದ ಮುತ್ತು ದುಂಬಾಳಿ ಎಂಬಾತ ಕೊಲೆಗೀಡಾದ ವ್ಯಕ್ತಿ. ಬಸ್​ನಿಲ್ದಾಣದಲ್ಲಿ ಈತನ ಮೇಲೆ ಎರಗಿದ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಈತನ ತಲೆಯ ಮೇಲೆ ದೊಡ್ಡ ಕಲ್ಲೊಂದನ್ನು ಎತ್ತಿ ಹಾಕಿದ್ದಾರೆ.

ಘಟನಾ ಸ್ಥಳಕ್ಕೆ ಬಸವಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಯಾವ ಕಾರಣಕ್ಕೆ, ಯಾರು ಕೊಲೆ ಮಾಡಿದ್ದಾರೆ ಎಂಬುದರ ಜತೆಗೆ ಕೊಲೆಯಾದವನ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net