ಫ್ಲೈ ಓವರ್​ ಮೇಲಿಂದ ಜಿಗಿದು ಆತ್ಮಹತ್ಯೆ; ಮೊಬೈಲ್​ಫೋನ್​ನಲ್ಲಿ ಮಾತನಾಡುತ್ತಲೇ ತಡೆಗೋಡೆ ಏರಿ ಹಾರಿದ...

Venkatesh
ಗೆಳೆಯನೊಂದಿಗೆ ವೆಂಕಟೇಶ್ (ಬಲಬದಿಯ ಚಿತ್ರ)
Published on

ಬೆಂಗಳೂರು: ಎಲೆಕ್ಟ್ರಾನಿಕ್​ ಸಿಟಿ ಫ್ಲೈ ಓವರ್​ನಲ್ಲಿ ಅಪಘಾತವಾಗಿ, ಮೇಲಿನಿಂದ ವಾಹನ ಕೆಳಕ್ಕೆ ಬಿದ್ದ ಅಪಘಾತ ಕೆಲವೇ ದಿನಗಳ ಹಿಂದಷ್ಟೇ ನಡೆದಿತ್ತು. ಆದರೆ ಇದೀಗ ಅದೇ ಫ್ಲೈ ಓವರ್​ ಮೇಲಿನಿಂದ ವ್ಯಕ್ತಿಯೊಬ್ಬ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ರಾಗಿಗುಡ್ಡ ನಿವಾಸಿ ವೆಂಕಟೇಶ್ (28) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈತ ಬಿಟಿಎಂ ಬಡಾವಣೆಯ ಎಮ್​ಐನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದ.

ಈತ ನಿನ್ನೆ ರಾತ್ರಿ 11.45ರ ಸುಮಾರಿಗೆ ಎಲೆಕ್ಟ್ರಾನಿಕ್​ ಸಿಟಿ ಫ್ಲೈ ಓವರ್ ಮೇಲೆ ಬಂದು ಲೇ ಬೈ ಬಳಿ ಕುಳಿತುಕೊಂಡಿದ್ದ. ಸುಮಾರು 20‌ ನಿಮಿಷಗಳ‌ ಕಾಲ ಮೊಬೈಲ್​ಫೋನ್​ ಮಾತನಾಡುತ್ತಲೇ ತಡೆಗೋಡೆ ಹತ್ತಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ 12ರ ಸುಮಾರಿಗೆ ಈ ಆತ್ಮಹತ್ಯೆ ನಡೆದಿದೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net