

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸಂಘಟನೆ ಸ್ಥಾಪಿಸಿದವರಿಗೆ ಸಂಘಟನೆಯ ನಿರ್ವಹಣೆಯ ಕಷ್ಟದ ಅರಿವು ಇರುತ್ತದೆ. ಉದ್ದೇಶ ಸಾರ್ಥಕಗೊಂಡಾಗ ಸಂತಸವಾಗುತ್ತದೆ. ಸಂಘಟನೆ ಬೆಳೆಸುವಲ್ಲಿ ಸಮುದಾಯದ ಯುವಜನತೆ ಮುತುವರ್ಜಿ ವಹಿಸಬೇಕು ಎಂದು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ ಹೇಳಿದರು.
ಗಾಣಿಗ ಯುವ ಸಂಟನೆ ಮತ್ತು ಮಹಿಳಾ ಸಂಟನೆ ಕೋಟೇಶ್ವರ ಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ಭಾನುವಾರ ಆಯೋಜಿಸಿದ್ದ ವಲಯ ಅಧಿವೇಶನ, ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕೊಡೆ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸವಾರಂಭದಲ್ಲಿ ಮಾತನಾಡಿದರು.
ಸವಿತಾ ವಾಸು, ಮಮತಾ ಗಾಣಿಗ, ವಿಶ್ವನಾಥ ಗಾಣಿಗ ಕೋಡಿ, ನಯನಾ ಸತೀಶ್, ಕಲಾವತಿ ಅಚ್ಯುತ ಗಾಣಿಗ, ಸುಶ್ಮಿತಾ ಎಸ್.ಗಾಣಿಗ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸವಾಜದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ, ತಾಲೂಕು ಗಾಣಿಗ ಸೇವಾ ಸಂದ ಅಧ್ಯಕ್ಷ ಕೆ.ಸತೀಶ್ ಗಾಣಿಗ, ನಾಗರಾಜ ಬಿ.ಜಿ. ಅಧ್ಯಕ್ಷತೆ ವಹಿಸಿದ್ದರು. ಸವಿತಾ ಗಾಣಿಗ, ವೀಣಾ ರಾವ್, ಸುಧಾಕರ ಗಾಣಿಗ ಉಪಸ್ಥಿತರಿದ್ದರು.
ಎಸ್.ಎನ್.ಗೋಪಿರಾಜ್ ಸ್ವಾಗತಿಸಿದರು. ಮಹೇಶ್ ಗಾಣಿಗ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸೌಮ್ಯಾ ನಾರಾಯಣ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.