

ಕುಂದಾಪುರ: ಜೀವನದಲ್ಲಿ ಎದುರಿಸುವ ಅವವಾನ, ಕೀಳರಿಮೆ, ಸೋಲುಗಳನ್ನು ಗೆಲುವಿನ ಸಾಧನೆಗೆ ಸೋಪಾನ ವಾಡಿಕೊಳ್ಳಬೇಕು. ಪ್ರಪಂಚ ಹೇಗೇ ನೋಡಲಿ ನಮ್ಮ ಸಾಧನೆಯ ಗುರಿ ನಿಚ್ಚಳವಾಗಿರಬೇಕು. ಕೇವಲ ಗುರಿಯನ್ನು ವಾತ್ರ ನೋಡುತ್ತಿರಬೇಕು. ಬದುಕಿನಲ್ಲಿ ಬರುವ ಸವಾಲುಗಳನ್ನು ಛಲದಿಂದ ಸ್ವೀಕರಿಸಿ ಎಂದು ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಹೇಳಿದರು.
ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸೋಮವಾರ ಜರುಗಿದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ಕಾಲೇಜು ವಿಶ್ವಸ್ಥ ಮಂಡಳಿ ಹಿರಿಯ ಸದಸ್ಯ ಕೆ.ಶಾಂತಾರಾಮ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಸಿ.ಎ.ನಾಗರಾಜ್ ಆಚಾರ್ಯ ಶುಭ ಹಾರೈಸಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ಯು.ಎಸ್.ಶೆಣೈ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜು ಪ್ರಾಂಶುಪಾಲ ಡಾ.ಶುಭಕರಾಚಾರಿ ಸ್ವಾಗತಿಸಿದರು. ಡಾ.ಜಿ.ಎಎಂ.ಗೊಂಡ ವಂದಿಸಿದರು. ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.