ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಮನೆಗೇ ಬೆಂಕಿ ಇಟ್ಟು ಧ್ವಂಸ!

House
Published on

ಕೋಲಾರ: ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನೊಬ್ಬ ಸಂಕಷ್ಟ ಎದುರಿಸುವಂತಾಗಿದ್ದು, ಆತನ ಮನೆಯನ್ನೇ ಧ್ವಂಸಗೊಳಿಸಲಾಗಿದೆ. ಕೋಲಾರ ಜಿಲ್ಲೆಯ ವೇಮಗಲ್ ತಾಲೂಕಿನಲ್ಲಿ ಈ ಪ್ರಕರಣ ನಡೆದಿದೆ.

ವೇಮಗಲ್ ಗ್ರಾಮದ ಮುನಿರಾಜು ಹಾಗೂ ಸಿಂಧು ಪ್ರೀತಿಸಿ ಮದುವೆಯಾದ ದಂಪತಿ. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಇತ್ತೀಚೆಗೆ ಮದುವೆಯಾಗಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಮತ್ತು ಮದುವೆಗೆ ಯುವತಿಯ ಮನೆಯವರಿಂದ ವಿರೋಧವಿತ್ತು.

ವಿರೋಧವನ್ನು ಲೆಕ್ಕಿಸದೆ ಮುನಿರಾಜು ಮದುವೆಯಾಗಿದ್ದಕ್ಕೆ ಸಿಟ್ಟಾದ ಯುವತಿ ಕಡೆಯವರು ಆತನ ಮನೆಯನ್ನು ಧ್ವಂಸ ಮಾಡಿದ್ದಾರೆ. ಮನೆಯಲ್ಲಿನ ವಸ್ತುಗಳಿಗೆ ಹಾನಿ ಮಾಡಿದ್ದಲ್ಲದೆ, ಅವುಗಳಿಗೆ ಬೆಂಕಿ ಕೂಡ ಹಚ್ಚಿದ್ದಾರೆ. ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net