

ಸಂಡೂರು: ಎರಡು ಸಾವಿರ ವರ್ಷ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಬೆಳೆಸಲು ಪ್ರತಿಯೊಬ್ಬ ಕನ್ನಡಿಗ ಕೈ ಜೋಡಿಸಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಹೇಳಿದರು.
ತೋರಣಗಲ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಮ್ಮಿಕೊಂಡಿದ್ದ ಅಪ್ಪೇನಳ್ಳಿ ಗುಂಡಮ್ಮ ಸುಬ್ಬಣ್ಣ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಕನ್ನಡದ ನೆಲ, ಜಲ, ಗಡಿಭಾಗಗಳಲ್ಲಿ ಕನ್ನಡಿಗರು ಭಾಷೆಯನ್ನು ಹೆಚ್ಚು ಬಳಕೆ ಮಾಡಬೇಕು. ಮಾತೃಭಾಷೆಯನ್ನು ನಾವು ಬೆಳೆಸದಿದ್ದರೆ ಮತ್ಯಾರು ಉಳಿಸಲು ಸಾಧ್ಯ. ಕನ್ನಡದ ಕಂಪನ್ನು ಎಲ್ಲ ಕಡೆ ಪಸರಿಸುವ ಮಾಡುವ ಕಾರ್ಯ ಯುವ ಪೀಳಿಗೆ ಕೈಯಲ್ಲಿದೆ ಎಂದರು.
ಯುವ ಮುಖಂಡ ವಿ.ಪಂಪಾಪತಿ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ನೂರ್ ಮಹ್ಮದ್, ಕುರುಬರ ಸಂಘ ತಾಲೂಕು ಅಧ್ಯಕ್ಷ ಕೆ.ಗುರುಪಾದಪ್ಪ, ಕೋಶಾಧ್ಯಕ್ಷ ವಿಶ್ವನಾಥ ಅಂಗಡಿ, ಸದಸ್ಯ ಯು.ಪಂಪಯ್ಯ, ಶಿಕ್ಷಕರಾದ ಬಿ.ಲೋಕೇಶ್, ಜ್ಯೋತಿ, ಸರೋಜಾ, ನಿವೃತ್ತ ಶಿಕ್ಷಕ ಎಂ.ರುದ್ರಮುನಿ, ಅಪ್ಪೇನಳ್ಳಿ ಕುಮಾರಸ್ವಾಮಿ, ವಿಜಯಕುಮಾರ್,ಬಂಡಿ ಯಂಕಪ್ಪ ಇದ್ದರು.