ಚಿಕ್ಕಕೆರೆಯಲ್ಲಿ ಬಿದ್ದು ಯುವಕ ಮೃತ

Published on

ಗುಡಿಬಂಡೆ: ತಾಲೂಕಿನ ತೀಲಕುಂಟಹಳ್ಳಿ ಗ್ರಾಮದ ಚಿಕ್ಕಕೆರೆಯಲ್ಲಿ ಬಿದ್ದು ಯುವಕ ಮೃತಪಟ್ಟಿದ್ದಾನೆ. ಮೂಲತ@ ದೇವನಹಳ್ಳಿ ತಾಲೂಕಿನ ವಿಜಯಪುರ ಗ್ರಾಮದ ವಾಸಿ ನವೀನ್​ (29) ಮೃತ. ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಮಧ್ಯಾಹ್ನ ಶವ ಹೊರತೆಗೆದರು. ತೀಲಕುಂಟಹಳ್ಳಿ ಭಾಗದಲ್ಲಿ ಜಲ್ಲಿ ಕ್ರಷರ್​ನಲ್ಲಿ ಕೆಲಸ ಮಾಡುತ್ತಿದ್ದ ನವೀನ್​ ಏತಕ್ಕಾಗಿ ಕೆರೆ ಬಳಿಗೆ ಹೋಗಿದ್ದ, ಕೆರೆಯಲ್ಲಿ ಹೇಗೆ ಬಿದ್ದ ಎಂಬುದು ಇನ್ನೂ ತಿಳಿದು ಬಂದಿಲ್ಲ. ಇನ್ನೂ ಟನಾ ಸ್ಥಳಕ್ಕೆ ಪೆರೇಸಂದ್ರ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net